ಬಂಗಾರ ಪೇಟೆಯಲ್ಲಿ ಲಾರಿ ಮುಷ್ಕರದ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

lorry

ಬಂಗಾರಪೇಟೆ, ಏ.6- ಲಾರಿ ಮಾಲೀಕರ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಳೆದ ಒಂದು ವಾರದಿಂದ ನಡೆಯುತ್ತಿರುವ ಲಾರಿ ಮುಷ್ಕರವನ್ನು ತೀವ್ರಗೊಳಿಸಿರುವುದರಿಂದ ಯಾವುದೇ ವಸ್ತುಗಳು ಜನರಿಗೆ ಸಿಗದೆ ತೀವ್ರ ತೊಂದರೆಯಾಗಿದೆ.ಸರಕು ಸಾಗಾಣಿಕೆ ವಾಹನಗಳಿಗೆ ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ಹಿಂಪಡೆಯಬೇಕು ಮತ್ತು ಟೋಲ್ ಶುಲ್ಕ ಕಡಿಮೆ ಮಾಡಬೇಕು ಹಾಗೂ ಮತ್ತಿತರೆ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಆಗ್ರಹಿಸಿ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಪ್ರತಿಭಟನೆ ನಡೆಸುತ್ತಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೇಡಿಕೆಗೆ ಸ್ಪಂದಿಸಿಲ್ಲದ ಕಾರಣ ಮುಷ್ಕರ ತೀವ್ರಗೊಳಿಸಲಾಗಿದೆ.

ಎಪಿಎಂಸಿ ಚೆಕ್ ಪೋಸ್ಟ್  ಸಮೀಪ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಪದಾಧಿಕಾರಿಗಳು ಕೋಲಾರ ಮತ್ತು ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ತಡೆದು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿಲ್ಲಿಸಿ ಯಾವುದೇ ಲಾರಿಗಳು ಸಂಚರಿಸದಂತೆ ಮುಷ್ಕರ ಮಾಡಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕಾರಮಂಗಲ ಶ್ರೀನಿವಾಸ್ ಮಾತನಾಡಿ, ಲಾರಿ ಮಾಲೀಕರು ಲಾರಿಗಳ ಬರುವ ಬಾಡಿಗೆಯಲ್ಲಿ ಚಾಲಕರಿಗೆ ಮತ್ತು ಜೀವನ ನಡೆಸಲು ಕಷ್ಟಕರವಾಗುತ್ತಿದೆ.ಆದ್ದರಿಂದ ಈ ಕೂಡಲೆ ಸರ್ಕಾರಗಳು ತಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin