ಬಂಡವಾಳ ಹೂಡಲು ಐಟಿ-ಬಿಟಿ ಕಂಪೆನಿಗಳಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Cm-Siddu-01

ಕೆ.ಆರ್.ಪುರ, ಜ.18- ನಗರದಲ್ಲಿ ಐಟಿ-ಬಿಟಿ ಕಂಪೆನಿಗಳು ಹೆಚ್ಚು ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದರು. ಮೈಸೂರು ರಸ್ತೆ ಹೂಡಿ ಬಳಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೆಟ್‍ಆ್ಯಪ್ ಸಾಪ್ಟ್‍ವೇರ್ ಕಂಪೆನಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟು ಕಂಪೆನಿ ಪ್ರಾರಂಭಿಸಿರುವುದು ಸಂತಸ ತಂದಿದೆ. ಕಂಪೆನಿಗೆ ಬೇಕಾದ ಎಲ್ಲಾ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದರು. ಇದು ಯಕೋ ಫ್ರೆಂಡ್ಲಿ ಕಂಪೆನಿಯಾಗಿದ್ದು, ಐಟಿ-ಬಿಟಿ ಕಂಪೆನಿಗಳು ಹೆಚ್ಚು ಹೂಡಿಕೆ ಮಾಡಲು ಮುಂದೆ ಬಂದರೆ ಅವರಿಗೆ ಬೇಕಾದ ಎಲ್ಲಾ ನೆರವು ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ನಗರದಲ್ಲಿ ಸುಮಾರು 3500 ಸಾಪ್ಟ್‍ವೇರ್ ಹಾಗೂ ಬಯೋಟೆಕ್ನಾಲಜಿ ಕಂಪೆನಿಗಳಿವೆ. ಐಟಿ-ಬಿಟಿ ಕಂಪೆನಿಗಳು ಹೆಚ್ಚಾಗಿರುವಂತಹ ಮಹದೇವಪುರ ಕ್ಷೇತ್ರದಲ್ಲಿ ಬೆನ್ನಿಗಾನಹಳ್ಳಿಯಿಂದ ವೈಟ್‍ಫೀಲ್ಡ್‍ವರೆಗೆ ಉದ್ಯೋಗಿಗಳಿಗೆ ಅನುಕೂಲವಾಗಲು ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಹೀಗೆ ಹೆಚ್ಚು ಇಂತಹ ಕಂಪೆನಿಗಳು ಹೆಚ್ಚಾಗಿ ಪ್ರಾರಂಭವಾದರೆ ಉದ್ಯೋಗ ಸೃಷ್ಟಿಯಾಗುತ್ತದೆ. ನೆಟ್‍ಆ್ಯಪ್‍ನಿಂದ ಉದ್ಯೋಗ ಸೃಷ್ಟಿಯ ಜತೆಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಎ.ಸಿ.ಹರಿಪ್ರಸಾದ್. ನಿತಿನ್ ಪುರುಷೋತ್ತಮ್, ಜಿಪಂ ಸದಸ್ಯ ಕೆಂಪರಾಜು, ಮಂಡೂರು ಪಂಚಾಯ್ತಿ ಅಧ್ಯಕ್ಷ ಜನಾರ್ಧನ್‍ಗೌಡ, ನೆಟ್‍ಆ್ಯಪ್ ಕಂಪೆನಿಯ ಸಿಇಒ ಜಾರ್ಜ್ ಕುರಿಯನ್ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin