ಬಂಡವಾಳ ಹೂಡಿಕೆಯಲ್ಲಿ ಗುಜರಾತನ್ನು ಹಿಂದಿಕ್ಕಿ ದೇಶದಲ್ಲಿ ಪ್ರಥಮ ಸ್ಥಾನಕ್ಕೇರಿದ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

karnataka

ಬೆಂಗಳೂರು, ಆ.10-ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ಪ್ರಥಮಸ್ಥಾನವನ್ನು ಪಡೆದುಕೊಂಡು ಬೀಗುತ್ತಿದ್ದ ಗುಜರಾತ್‍ ಈ  ಬಾರಿ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಬಂಡವಾಳ ಹೂಡಿಕೆದಾರರು ಇದೀಗ ಗುಜರಾತ್‍ನ್ನು ಬಿಟ್ಟು ಕರ್ನಾಟಕದತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ಉದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನವನ್ನು ಗಳಿಸಿದೆ.  ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 2016ನೆ ಸಾಲಿನ ¿ಉದ್ಯಮ ಸುಧಾರಣಾ ಕ್ರಿಯಾ ಯೋಜನೆ¿ ಸೂಚ್ಯಂಕದ ಪ್ರಕಾರ, ಕರ್ನಾಟಕವು 2016ರ ಜನವರಿಯಿಂದ-ಜೂನ್ವರೆಗಿನ ಅವಧಿಯಲ್ಲಿ 67,757 ಕೋಟಿ ರೂ. ಬಂಡವಾಳ ಆಕರ್ಷಿಸಿದೆ. ಇದೇ ಅವಧಿಯಲ್ಲಿ ಗುಜರಾತ್ ಆಕರ್ಷಿಸಿರುವುದು 21,309 ಕೋಟಿ ರೂ. ಬಂಡವಾಳವನ್ನು.

ಅಂದರೆ ಕರ್ನಾಟಕ ಆಕರ್ಷಿಸಿರುವುದು ಗುಜರಾತ್ಗಿಂತ ದುಪ್ಪಟ್ಟು ಪ್ರಮಾಣದ ಬಂಡವಾಳವನ್ನು. 2015ರ ಸಾಲಿನಲ್ಲಿ ಗುಜರಾತ್ 64,733 ಕೋಟಿ ರೂ. ಬಂಡವಾಳ ಆಕರ್ಷಿಸಿದ್ದು, ಈ ಬಾರಿ ಕರ್ನಾಟಕ ಈ ದಾಖಲೆಯನ್ನು ಅರ್ಧದಲ್ಲೇ ಮುರಿದಿದೆ. 2015ರ ಅವಧಿಯಲ್ಲಿ ಭಾರತವು 3.11 ಲಕ್ಷ ಕೋ. ರೂ. ಬಂಡವಾಳ ಆಕರ್ಷಣೆ ಮಾಡಿದೆ. ಈ ಪೈಕಿ ಗುಜರಾತ್ನ ಪಾಲು 64,733 ಕೋ. ರೂ. ಆದರೆ 2016-17ನೆ ಅವಧಿಯ ಜನವರಿಯಿಂದ ಜೂನ್ವರೆಗೆ 21,309 ಕೋಟಿ ರೂ. ಬಂಡವಾಳವನ್ನು ಗುಜರಾತï ಪಡೆದಿದೆ. 2015ರಲ್ಲಿ ಕರ್ನಾಟಕ ರಾಜ್ಯದ ಪಾಲು 31,668 ಕೋ. ರೂ. ಆಗಿದ್ದರೆ, 2016ರ ಜನವರಿಯಿಂದ ಜೂನï ಅವಧಿಯಲ್ಲಿ 67,757 ಕೋಟಿ ರೂ.. ಈ ಮೂಲಕ ಬಂಡವಾಳ ಆಕರ್ಷಣೆಯಲ್ಲಿ ಶೇ. 19.18ರಷ್ಟು ಬೆಳವಣಿಗೆ ಕಾಯ್ದುಕೊಂಡು, ಉದ್ಯಮಿಗಳನ್ನು ತನ್ನತ್ತ ಸೆಳೆಯುತ್ತಿರುವ ಇತರ ರಾಜ್ಯಗಳಿಗೆ ಕರ್ನಾಟಕ ಸೆಡ್ಡು ಹೊಡೆದಿದೆ.

Facebook Comments

Sri Raghav

Admin