ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
Tigers
ಸಾಂಧರ್ಭಿಕ ಚಿತ್ರ

ಮೈಸೂರು, ಫೆ.12-ಹುಲಿಗಳ ಸರಣಿ ಸಾವು ಮುಂದುವರೆದಿದ್ದು, ಜಿಲ್ಲೆಯಲ್ಲಿ ಮತ್ತೊಂದು ಹೆಣ್ಣು ಹುಲಿ ಸಾವನ್ನಪ್ಪಿದೆ. ಎಚ್.ಡಿ.ಕೋಟೆ ತಾಲೂಕಿನ ಯಡಿಯಾಲ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಸುಮಾರು 10 ವರ್ಷದ ಹೆಣ್ಣು ಹುಲಿ ಮೃತಪಟ್ಟಿದೆ.  ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಯಡಿಯಾಲ ವನ್ಯಜೀವಿ ವಲಯದ ಕೋಡಹಳ್ಳಿ ಸಮೀಪದ ಬೆಳ್ಳೂರು ಹುಂಡಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಹುಲಿಗಳ ನಡುವೆ ಕಾದಾಟ ನಡೆದು ಹೆಣ್ಣು ಹುಲಿ ಮೃತಪಟ್ಟಿದೆ. ಹುಲಿಯ ಕುತ್ತಿಗೆ ಮತ್ತು ಭುಜದ ಮೇಲೆ ಮತ್ತೊಂದು ಹುಲಿ ದಾಳಿ ಮಾಡಿದ್ದರಿಂದ ಮೂಳೆ ಮುರಿದು ತೀವ್ರ ರಕ್ತಸ್ರಾವವಾಗಿ ಹೆಣ್ಣು ಹುಲಿ ಮೃತಪಟ್ಟಿದೆ ಎಂದು ಎಸಿಎಫ್ ಪರಮೇಶ್ವರ್ ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿಯ ಮೃತದೇಹ ಪತ್ತೆಯಾಗಿದೆ ಎಂದು ಅವರು ಹೇಳಿದರು. ಕಳೆದ ಎರಡು ತಿಂಗಳ ಹಿಂದೆ ಎರಡು ಹುಲಿಗಳು ಸಾವನ್ನಪ್ಪಿದ್ದವು. ನಿನ್ನೆ ಸಾವನ್ನಪ್ಪಿರುವ ಹುಲಿ ಸೇರಿದಂತೆ ಹುಲಿಗಳ ಸಾವಿನ ಸಂಖ್ಯೆ 100ಕ್ಕೇರಿದೆ.  ಹುಲಿಗಳ ಸರಣಿ ಸಾವಿನಿಂದ ಅರಣ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin