ಬಂದರು ಒಡ್ಡು ಕುಸಿದು ನಾಲ್ವರ ಸಾವು, ಅನೇಕರು ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

4Dead--01

ಕೊಲ್ಕತಾ, ಏ.26-ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯ ಭದ್ರೇಶ್ವರ್‍ನಲ್ಲಿ ಬಂದರು ಒಡ್ಡು (ಜೆಟ್ಟಿ) ಕುಸಿದು ನಾಲ್ವರು ಮೃತಪಟ್ಟು ಅನೇಕರು ಕಣ್ಮರೆಯಾಗಿರುವ ದುರಂತ ಇಂದು ಮಧ್ಯಾಹ್ನ ಸಂಭವಿಸಿದೆ.   ಜೆಟ್ಟಿ (ಬಂದರು ಕಾಪು ಅಥವಾ ರೇವು ಕಕ್ಷೆ) ಕುಸಿದ ಪರಿಣಾಮವಾಗಿ ಸಾವು-ನೋವು ಸಂಭವಿಸಿದೆ. ಅನೇಕರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಖೇಶ್ ಜೈನ್ ತಿಳಿಸಿದ್ದಾರೆ.   ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಮರೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin