ಬಂದೂಕುಧಾರಿಗಳಿಂದ ಟಿಎಂಸಿ ಕಾರ್ಯಕರ್ತರಿಬ್ಬರ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

TMC-Worjkker-Kiled

ಕೊಲ್ಕತಾ, ಜ.12- ತೃಣಮೂಲ ಕಾಂಗ್ರೆಸ್ ಕಾರ್ಪೊರೇಟರ್ ಪತಿ ಮತ್ತು ಅವರ ಸ್ನೇಹಿತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ದಾಳಿಯಲ್ಲಿ ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ.  18ನೇ ವಾರ್ಡ್ ಕಾರ್ಪೊರೇಟರ್ ಪೂಜಾ ನಾಯ್ಡು ಅವರ ಪತಿ ಶ್ರೀನಿವಾಸ ನಾಯ್ಡು (ಶ್ರೀನು) ಮತ್ತು ಅವರ ಸ್ನೇಹಿತ ಧರ್ಮರಾವ್ ಬಂದೂಕುಧಾರಿಗಳಿಂದ ಹತ್ಯೆಯಾದವರು. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸದಸ್ಯರಾಗಿದ್ದಾರೆ.

ಬಂದೂಕುಧಾರಿಗಳ ಗುಂಪೊಂದು ಟಿಎಂಸಿ ಪಕ್ಷದ ಕಚೇರಿ ಪ್ರವೇಶ ದ್ವಾರದಲ್ಲಿ ಬಾಂಬ್‍ಗಳನ್ನು ಎಸೆದು ಒಳ ನುಗ್ಗಿ ಅಲ್ಲಿದ್ದವರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿತು. ಶ್ರೀನು, ರಾವ್ ಸೇರಿದಂತೆ ಐವರು ತೀವ್ರ ಗಾಯಗೊಂಡರು.  ಗುಂಡೇಟಿನಿಂದ ತೀವ್ರ ಗಾಯಗೊಂಡ ಸೀನು ಮತ್ತು ರಾವ್ ಅವರನ್ನು ಖರಗ್‍ಪುರ್‍ನಿಂದ ಕೊಲ್ಕತಾಗೆ ಕರೆತರುವಾಗ ಅವರಿಬ್ಬರು ಮೃತಪಟ್ಟರು. ತೀವ್ರ ಗಾಯಗೊಂಡಿರುವ ಇತರ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin