ಬಂದೂಕುಧಾರಿಗಳಿಂದ ಬಿಜೆಪಿ ನಾಯಕ ಬ್ರಿಜ್ಪಾಲ್ ಮೇಲೆ ಗುಂಡಿನ ದಾಳಿ
ಗಾಜಿಯಾಬಾದ್,ಆ.12-ಬಿಜೆಪಿ ಪ್ರಭಾವಿ ನಾಯಕ ಬ್ರಿಜ್ಪಾಲ್ ಟೈವಾಟಿಯಾ ಅವರ ಮೇಲೆ ಅಪರಿಚಿತ ಬಂದೂಕುಧಾರಿಗಳು ನೂರಕ್ಕೂ ಹೆಚ್ಚು ಸುತ್ತು ಗುಂಡಿನ ಮಳೆಗರೆದಿರುವ ಘಟನೆ ಗುರುವಾರ ರಾತ್ರಿ ಇಲ್ಲಿ ನಡೆದಿದೆ. ಹತ್ಯೆ ಯತ್ನದಿಂದ ಪಾರಾಗಿ ಗಾಯಗೊಂಡಿರುವ ಬ್ರಿಜ್ಪಾಲ್ ಅವರಿಗೆ ಗಾಜಿಯಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಮ್ಮ ಏಳು ಮಂದಿ ಬೆಂಬಲಿಗರೊಂದಿಗೆ ಬೆಂಗಾವಲಿನ ವಾಹನದಲ್ಲಿ ಬ್ರಿಜ್ಪಾಲ್ ತೆರಳುತ್ತಿದ್ದಾಗ, ಬಂದೂಕುಧಾರಿಗಳು ಕಾರಿನ ಮೇಲೆ ಒಂದೇ ಸಮನೆ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಬ್ರಿಜ್ಪಾಲ್ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷವೇ ಈ ಹತ್ಯೆ ಯತ್ನಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೃತ್ಯ ನಡೆದ ಸ್ಥಳದಿಂದ ಎಕೆ-47 ರೈಫಲ್ ಮತ್ತು ಎರಡು 9 ಎಂಎಂ ಪಿಸ್ತೂಲು ಸೇರಿದಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
► Follow us on – Facebook / Twitter / Google+