ಬಂದ್‍ಗೆ ಅರಕಲಗೂಡಿನಲ್ಲಿ ನೀರಸ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

arakalagudu

ಅರಕಲಗೂಡು, ಸೆ.3– ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಬಂದ್‍ಗೆ ಪಟ್ಟಣದಲ್ಲಿ ನೀರಸ ಬೆಂಬಲ ವ್ಯಕ್ತವಾಯಿತು.ಮುಂಜಾನೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಬಂದ್‍ಗೆ ಸಹಕರಿಸುವಂತೆ ವಾಹನ ಮುಖೇನ ಧ್ವನಿವರ್ಧಕದಲ್ಲಿ ಮನವಿ ಮಾಡಿದರೂ ಕೂಡ ಹೆಚ್ಚಿನ ಬೆಂಬಲ ಸಿಗಲಿಲ್ಲ.ಎಂದಿನಂತೆ ಖಾಸಗಿ ವಾಹನಗಳ ಸಂಚಾರ ಮುಂದುವರಿದಿತ್ತು. ಇದರಿಂದ ಪಟ್ಟಣಕ್ಕೆ ಆಗಮಿಸುವ ಮತ್ತು ಹೊರ ಹೋಗುವ ಜನತೆಗೆ ಪ್ರಯಾಣದಲ್ಲಿ ಸಮಸ್ಯೆ ಉಂಟಾಗಲಿಲ್ಲ.
ಕೇಂದ್ರ ಸರಕಾರದ ಬ್ಯಾಂಕ್, ಕಚೇರಿಗಳು ಬಾಗಿಲು ಮುಚ್ಚಿದ್ದವು. ಬ್ಯಾಂಕ್, ಅಂಚೆ ಕಚೇರಿ, ದೂರವಾಣಿ ಇಲಾಖೆಗಳ ಬಳಿ ಯಾವುದೇ ನೌಕರರ ಸುಳಿವು ಇರಲಿಲ್ಲ. ರಾಜ್ಯ ಸರಕಾರದ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಿದವು.ವ್ಯಾಪಾರ ವಹಿವಾಟು: ವಾರದ ಸಂತೆ ದಿನವಾಗಿದ್ದರಿಂದ ಬಂದ್‍ನ ಬಿಸಿ ಸಂತೆ ವ್ಯಾಪಾರಸ್ಥರಿಗೆ ಮುಟ್ಟಲಿಲ್ಲ. ಗೌರಿ ಗಣೇಶ ಹಬ್ಬದ ಸಂತೆ ಆಗಿದ್ದರಿಂದ ಬಲುಜೋರಾಗಿಯೇ ವ್ಯಾಪಾರ ನಡೆದವು.

ರಾಮನಾಥಪುg , ಕೊಣನೂರು ಹಾಗೂ ಅರಕಲಗೂಡಿನ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ನಿಲ್ಲಿಸಿಕೊಂಡು ಬಂದ್‍ಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು.  ಸಾರಿಗೆ ನೌಕರರ ಸಂಘದ ಮುಖಂಡ ತಿಮ್ಮೇಗೌಡ ಮಾತನಾಡಿ,ಕಾರ್ಮಿಕ ಸಂಘಟನೆಗಳು ಕರೆನೀಡಿದ್ದ ಬಂದ್‍ಗೆ ನಮ್ಮ ಎಲ್ಲಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕರ್ತವ್ಯಕ್ಕೆ ಹಾಜರಾಗಿದ್ದೇವೆ ವಿನಃ ಯಾವುದೇ ಮಾರ್ಗಕ್ಕೆ ತೆರಳಿ ಕೆಲಸ ನಿರ್ವಹಿಸಿಲ್ಲ ಎಂದರು.ದೊಡ್ಡಮ್ಮ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗು ಕಾರ್ಯಕರ್ತರು ಸೇರಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬೈಪಾಸ್ ರಸ್ತೆ, ಸಂತೆಮಾಳ, ಹೊಳೆನರಸೀಪುರ ರಸ್ತೆ, ಮುಖ್ಯ ರಸ್ತೆ ಮುಖೇನ ಆಗಮಿಸಿ ವೃತ್ತದಲ್ಲಿ ಧರಣಿ ನಡೆಸಿದರು.ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಯಶೋಧ, ಕಾರ್ಮಿಕ ಸಂಘಟನೆ ಮುಖಂಡ ಮಂಜು ಮಾತನಾಡಿದರು. ಸುಜಾತ,ಲಕ್ಷ್ಮಯ್ಯ,ಧರ್ಮಯ್ಯ,ಅಶೋಕ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ನಂತರ ಬಿಇಒ ಕಚೇರಿಗೆ ತೆರಳಿ ಪ್ರತಿಭಟನಾನಿರತರು ಬೇಡಿಕೆಯ ಮನವಿ ಸಲ್ಲಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin