ಬಂದ್‍ಗೆ ಮಧುಗಿರಿ ಜನತೆಯ ಸಂಪೂರ್ಣ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

madhugiri

ಮಧುಗಿರಿ, ಸೆ.10- ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕರೆ ನೀಡಿದ್ದ ರಾಜ್ಯ ಬಂದ್‍ಗೆ ಮಧುಗಿರಿಯ ಜನತೆ ಸಂಪೂರ್ಣ ಸಾಥ್ ನೀಡಿದರು.ಬಂದ್‍ಗೆ ತಾಲೂಕು ರೈತ ಸಂಘ, ತಾಲೂಕು ಬಿಜೆಪಿ ಘಟಕ, ಜಯ ಕರ್ನಾಟಕ ಸಂಘ, ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘ, ಆಟೋ ಚಾಲಕರ ಸಂಘ, ಕನ್ನಡ ಸೇನೆ, ಕಾರು ಮಾಲಿಕರ ಹಾಗೂ ಚಾಲಕರ ಸಂಘ, ಅಂಗಡಿ ಮಾಲಿಕರ ಸಂಘ, ಖಾಸಗಿ ಬಸ್ ಮಾಲಿಕರ ಹಾಗೂ ಏಜೆಂಟರ ಸಂಘ, ಪಂಚಾಯತ್ ಕಾವಲು ಸಮಿತಿ ಹಾಗೂ ಇನ್ನಿತರೆ ಸಂಘಟನೆಗಳು ಸಾಥ್ ನೀಡಿದವು.

ತಾಲೂಕು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ, ತುಮಕೂರು ಗೇಟ್ ಬಳಿ ತಮಿಳುನಾಡು ಸಿ.ಎಂ ಜಯಲಲಿತ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಶಂಕರಪ್ಪ, ತಾಲೂಕು ರೈತ ಸಂಘದ ಕಾರ್ಯದರ್ಶಿ, ರಮೇಶ್ ರೆಡ್ಡಿ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ, ಕನ್ನಡ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು, ಆಧ್ಯಕ್ಷ ರಾಘವೇಂದ್ರ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಚಂದನ್, ರೈತ ಸಂಘದ ಅಧ್ಯಕ್ಷರಾದ ರಾಜಣ್ಣ, ರಮೇಶ್ ಕನಕದಾಸ್, ಕಸಾಪ ಅಧ್ಯಕ್ಷ ಚಿ.ಸೂ ಕೃಷ್ಣಮೂರ್ತಿ, ಪುರಸಭಾ ಸದಸ್ಯ ಚಂದ್ರಶೇಖರ್ ಬಾಬು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin