ಬಂದ್‍ಗೆ ಹೊಟೇಲ್ ಮಾಲೀಕರ ಸಂಘ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu
ನಂಜನಗೂಡು, ಸೆ.1- ನಗರದಲ್ಲಿ ನಡೆಯುವ ಸಾರ್ವತ್ರಿಕ, ಯಾವುದೇ ಬಂದ್‍ಗಳಿಗೆ ಹೋಟೆಲ್ ಮಾಲೀಕರ ಸಂಘದವರು ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೊಟೇಲ್ ಮಾಲೀಕರ ಸಂಘದ ರಮೇಶ್ ಧನ್ಯ, ಉಪಾಧ್ಯಕ್ಷ ಎಂ.ಎನ್.ಮಂಜುನಾಥ್ ತಿಳಿಸಿದ್ದಾರೆ. ಸಂಘ-ಸಂಸ್ಥೆ ಮತ್ತು ಇತರೆಯವರು ಏಕಾಏಕಿ ಬಂದ್ ಆಚರಿಸುತ್ತಿರುವುದ್ದರಿಂದ ಕಷ್ಟದ ಉದ್ದಿಮೆಯಾದ ಹೊಟೇಲ್ ಮಾಲೀಕರುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಸಂಘ-ಸಂಸ್ಥೆಗಳು ನಮಗೆ ಮುನ್ಸೂಚನೆ ನೀಡದೆ ದಿಢೀರೆಂದು ಏಕಾಏಕಿ ಬಂದ್ ಕರೆ ನೀಡುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ, ನಮಗೆ 24ಗಂಟೆಗಳ ಮುಂಚಿತವಾಗಿ ತಿಳಿಸಿದರೆ ನಮ್ಮ ಹೋಟೆಲ್ ಮಾಲೀಕರ ಸಂಘದವರು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.  ಹೋಟೆಲ್ ಬೇಕಾಗುವ ತಿಂಡಿ-ತಿನಿಸುಗಳ ತಯಾರಿಕೆಗೆ ಹಿಂದಿನ ದಿನದಂದೆ ಪೂರ್ವಸಿದ್ದತೆ ಮಾಡಿಕೊಂಡಿರುತ್ತೇವೆ ದಿಢೀರೆಂದು ಮುಷ್ಕರ, ಬಂದ್, ಆಚರಿಸಿದರೆ ಇದರಿಂದ ತುಂಬಾ ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದರು.ಕಾರ್ಯದರ್ಶಿ ಅನಿಲ್, ಸಹಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ರಾಜೇಂದ್ರ, ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin