ಬಂದ್ ಆಗಲಿವೆಯೇ ಕಳೆಪೆ ಸಾಧನೆ ಮಾಡಿದ ಶೈಕ್ಷಣಿಕ ಸಂಸ್ಥೆಗಳು..?

ಈ ಸುದ್ದಿಯನ್ನು ಶೇರ್ ಮಾಡಿ

sCHOOLS--01

ನವದೆಹಲಿ, ಮಾ.19-ಕಳೆಪೆ ಸಾಧನೆಯ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬಂದ್ ಆಗಲಿವೆಯೇ? ಇಂಥದ್ದೊಂದು ಎಚ್ಚರಿಕೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನೀಡಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮದ ನಡುವೆಯೂ ತನ್ನ ಕಳಪೆ ಸಾಧನೆಯನ್ನು ಸರಿಪಡಿಸಿಕೊಂಡು ಸುಧಾರಣೆ ಮಾಡಿಕೊಳ್ಳಲು ವಿಫಲವಾಗುವ ಇಂಥ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲಾಗುವುದು ಅಥವಾ ಇತರ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಯುಜಿಸಿ ಶೈಕ್ಷಣಿಕ ವ್ಯವಸ್ಥೆಯ ಪುನರ್ರಚನೆಗಾಗಿ ನೀಲನಕ್ಷೆಯೊಂದನ್ನು ಸಿದ್ದಗೊಳಿಸುತ್ತಿದ್ದು, ಹೆಚ್ಚು ಸ್ವಾಯತ್ತತೆ ಮತ್ತು ಕನಿಷ್ಠ ನಿಬಂಧನೆಗಳಿಗೆ ಒತ್ತು ನೀಡಲಿದೆ.

ದೇಶದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಲೆಕ್ಕ ಪರಿಶೋಧನೆ ನಡೆಸಲು ಪರಿಗಣಿಸಲಾಗುತ್ತಿದೆ. ಅವುಗಳ ಸಾಧನೆ-ಸಾಮಥ್ರ್ಯದ ಮಾನದಂಡದ ಮೇಲೆ ಮೂರು ವರ್ಗಗಳಾಗಿ ಅವುಗಳನ್ನು ವಿಂಗಡಿಸಲಾಗುತ್ತದೆ. ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು, ಸುಧಾರಣೆಗೆ ಅವಕಾಶ ಇರುವ ಸಂಸ್ಥೆಗಳು ಮತ್ತು ಕಳಪೆ ಸಾಧನೆಯ ಸಂಸ್ಥೆಗಳು ಎಂದು ಮೂರು ವರ್ಗಗಳ ಮೂಲಕ ಇಂಥ ಶೈಕ್ಷಣಿಕ ಘಟಕಗಳ ಸಾಧನಾ ಶ್ರೇಣಿಯನ್ನು ಮಾಪನ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin