ಬಕ್ರೀದ್ ವೇಳೆ ಶಾಂತಿ ಕದಡದಿರಿ

ಈ ಸುದ್ದಿಯನ್ನು ಶೇರ್ ಮಾಡಿ

policce--speeck-in--bakrid

ಬೇಲೂರು, ಸೆ.12- ಇಲ್ಲಿನ ಜನರು ಸಾಮರಸ್ಯದಿಂದ ಬದುಕುತಿದ್ದು ಬಕ್ರೀದ್ ಲೆಹಬ್ಬದ ಆಚರಣೆಯ ಸಂದರ್ಭದಲ್ಲಿ ಶಾಂತಿ ಕದಡದಂತೆ ಸಹಕರಿಸಬೇಕು ಎಂದು ವೃತ ನೀರಿಕ್ಷಕ ಲೋಕೇಶ್ ಹೇಳಿದರು ಪಟ್ಟಣದ ನೆಹರು ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು ಎಲ್ಲಾ ಜಾತಿ, ದರ್ಮದ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

ಆದರೆ ಬಕ್ರೀದ್ ಹಬ್ಬದ ಮೆರವಣಿಗೆ, ಗಣೇಶೋತ್ಸವ ಇತಂಹ ಸಂದರ್ಭಗಳಲ್ಲಿ ಕೆಲವು ಕಿಡಿಗೇಡಿಗಳು ಅವರವರ ವ್ಯಯಕ್ತಿಕ ಹಿತಸಕ್ತಿಗಾಗಿ ಸಾಮರಸ್ಯವನ್ನು ಒಡೆಯುವ ಕೆಲಸ ಮಾಡುತ್ತಾರೆ. ಹಾಗೂ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುತ್ತಾರೆ. ಆದರಿಂದ ಯಾರು ಕೂಡ ಅನಾವಶ್ಯಕ ವಿಷಯಗಳಿಗೆ ಕಿವಿಗೊಡದೆ ಶಾಂತಿಯುತವಾಗಿ ಬಕ್ರೀದ್ ಹಾಗೂ ಗಣೇಶೋತ್ಸವವನ್ನು ಹಬ್ಬವನ್ನು ಆಚರಿಸಬೇಕು ಶಾಂತಿ ಕದಡುವ ವಿಷಯಗಳು ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು ಎಎಸ್‍ಐ ಚಂದ್ರಪ್ಪ ಮಾತನಾಡಿ, ಬಕ್ರೀದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ವೇಗವಾಗಿ ಅಡ್ಡದಿಡ್ಡಿಯಾಗಿ ಬೈಕ್ ಚಲಾಯಿಸಿ ಅನಾಹುತಕ್ಕೆ ಸಿಲುಕುವ ಕಾರಣದಿಂದ ಬೈಕ್ ರ್ಯಾಲಿಯನ್ನು ಮಾಡಬಾರದು ಎಂದರುಬೇಲೂರು ಹಳೇಬಿಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಮಾಲುದ್ದೀನ್, ಕರವೇ ಅಧ್ಯಕ್ಷ ಬೋಜೇಗೌಡ, ಜಯಕರ್ನಾಟಕ ಅಧ್ಯಕ್ಷ ಅರುಣ್‍ಕುಮಾರ್, ಟಿಪ್ಪು ಸೇನೆ ಅಧ್ಯಕ್ಷ ನೂರ್‍ಅಹ್ಮದ್, ಕುಮಾರ್‍ನಾಯಕ್, ಇಮ್ತಿಯಾಜ್, ಇನ್ನಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin