ಬಗರ್‍ಹುಕುಂ ಸಾಗುವಳಿ ಅವಧಿ 16 ರಿಂದ 18 ವರ್ಷಗಳಿಗೆ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Jayachandra

ಬೆಂಗಳೂರು, ಫೆ.10- ಬಗರ್‍ಹುಕುಂ ಸಾಗುವಳಿ ಅವಧಿಯನ್ನು 16 ವರ್ಷದ ಬದಲು 18 ವರ್ಷಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿಧಾನಸಭೆಯಲ್ಲಿಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಬದಲಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
ಅರ್ಜಿ ನಮೂನೆ 50ರಲ್ಲಿ ಭೂ ಸಕ್ರಮಕ್ಕಾಗಿ 23,382, ಅರ್ಜಿ ನಮೂನೆ 53ರಡಿ 3,09,293 ಅರ್ಜಿಗಳು ಬಂದಿವೆ. ಅವು ವಿಲೇವಾರಿಯಾಗದೆ ಬಾಕಿ ಉಳಿದಿವೆ.

ಇವುಗಳನ್ನು ಇತ್ಯರ್ಥ ಪಡಿಸಲು ಅನುಕೂಲವಾಗುವಂತೆ ಭೂ ಕಂದಾಯ ಕಾಯ್ದೆ 1964ರ 94 ಬಿ ಪ್ರಕರಣವನ್ನು ತಿದ್ದುಪಡಿ ಮಾಡಲಾಗಿದೆ. ಇದರ ಅನುಸಾರ 2000ಇಸವಿ ಪ್ರಾರಂಭದ ದಿನಾಂಕದಿಂದ 16 ವರ್ಷದೊಳಗೆ ಅನುಭೋಗದಲ್ಲಿರುವ ಫಲಾನುಭವಿ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿದಾಗ ಭೂಮಿ ಮಂಜೂರಾತಿ ಮಾಡಬೇಕೆಂದು ನಿಯಮವಿತ್ತು. ಇಂದು ಮಂಡಿಸಲಾದ ತಿದ್ದುಪಡಿ ಮಸೂದೆಯಲ್ಲಿ 16 ವರ್ಷದ ಬದಲಿಗೆ ಅನುಭೋಗದ ಅವಧಿಯನ್ನು 18 ವರ್ಷಕ್ಕೆ ಹೆಚ್ಚಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin