ಬಗೆದಷ್ಟೂ ಸಿಗುತ್ತಿದೆ ಕಪ್ಪುಹಣ : ದೇಶದ ಹಲವೆಡೆ ಐಟಿ,ಇಡಿ ಜಪ್ತಿ ಕಾರ್ಯ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

Black-Money-01

ನವದೆಹಲಿ, ಡಿ.18- ನೋಟು ರದ್ಧತಿ ನಂತರ ಬ್ರಹ್ಮಾಂಡ ಕಾಳಧನ ಮತ್ತು ಹವಾಲ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ದೇಶದ ವಿವಿಧೆಡೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಜಾಲೀಸ್ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.   ಹೈದರಾಬಾದ್ನಲ್ಲಿ ಎರಡು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕೆಲವರನ್ನು ಬಂಧಿಸಿ 2,000 ರೂ. ಮುಖಬೆಲೆಯ ಒಟ್ಟು 66 ಲಕ್ಷ ರೂ. ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.  ಹಿಯಾಯತ್ನಗರದ ತೆಲುಗು ಅಕಾಡೆಮಿಯಲ್ಲಿ 36 ಲಕ್ಷ ರೂ.ಗಳನ್ನು ಜಪ್ತಿ ಮಾಡಿ ಕೆಲ ಪದಾಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಟ್ಯಾಂಕ್ಬಂಡ್ ಪ್ರದೇಶದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರನ್ನು ಬಂಧಿಸಿ 30 ಲಕ್ಷ ರೂ. ಹೊಸ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ನೊಯ್ಡಾದಲ್ಲಿ ಉತ್ತರ ಪ್ರದೇಶ ಐಟಿ ಅಧಿಕಾರಿಗಳು ಹರ್ಯಾಣದ ಮೂವರನ್ನು ಬಂಧಿಸಿ 18 ಲಕ್ಷ ರೂ. ಹೊಸ ನೋಟುಗಳನ್ನು ಜಪ್ತಿ ಮಾಡಿದ್ದಾರೆ.  ದೇಶದ ವಿವಿಧೆಡೆ ಭಾರೀ ಕಾಳಧನಗಳು ಪತ್ತೆಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಇದು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಜೊತೆಗೆ ಅಕ್ರಮ ಸಂಪತ್ತಿನ ಮೊತ್ತವೂ ಏರುತ್ತಲೇ ಇದೆ.  ದೇಶಾದ್ಯಂತ ಅಕ್ರಮ ಹೊಸ ನೋಟು ಹೊಂದಿದ್ದವರ ಮೇಲೆ ಮುಂದುವರೆದಿರುವ ದಾಳಿಯಲ್ಲಿ ಸಾಕಷ್ಟು ಹಣವನ್ನು ವಶಪಡಿಸಿಕೊಳ್ಳಲಾಗುತ್ತಲೇ ಇದೆ. ಹರಿಯಾಣ ಜಾಲೀಸರು ಕುರುಕ್ಷೇತ್ರದ ಶಹಾಬಾದ್ ಮಾರ್ಕಾಂಡ ಸೇತುವೆ ಬಳಿ ಚೆಕ್ ಪೋಸ್ಟ್ ನಲ್ಲಿ  ಕಾರೊಂದನ್ನು ಅಡ್ಡಗಟ್ಟಿ 20 ಲಕ್ಷ ರೂ.ಗಳಿಗೂ ಹೆಚ್ಚು ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಹಣ ವಿನಿಮಯಕಾರ ಅಮನ್ದೀಪ್ ಎಂಬಾತನನ್ನು ಬಂಧಿಸಲಾಗಿದ್ದು, ಕಾರನ್ನೂ ಸಹ ಜಪ್ತಿ ಮಾಡಲಾಗಿದೆ. ದೇಶದ ಗಡಿ ಭಾಗಗಳಲ್ಲೂ ಕೂಡ ಅಕ್ರಮ ನೋಟು ವಹಿವಾಟು ಮತ್ತು ಹವಾಲಾ ಮೂಲಕ ಕಾಳಧನ ಸಾಗಣೆ ನಡೆಯುತ್ತಿದೆ. ಉತ್ತರ ಪ್ರದೇಶದ ಭಾರತ-ನೇಪಾಳ ಗಡಿ ಬಳಿ ಭವೇಜ್ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮೊತ್ತದ ನೇಪಾಳಿ ಕರೆನ್ಸಿ, ಲಕ್ಷಾಂತರ ರೂ. ಮೌಲ್ಯದ ಭಾರತೀಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ದೆಹಲಿ, ಕರ್ನಾಟಕ, ಚೆನ್ನೈ, ಹೈದರಾಬಾದ್, ಮುಂಬೈ, ಜೈಪುರ, ಇಂಧೋರ್, ಅಹಮದಾಬಾದ್, ಉತ್ತರಪ್ರದೇಶದ ಹಲವೆಡೆ ಭಾರೀ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣ 3 ಸಾವಿರ ಕೋಟಿ ಮೀರಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin