ಬಗೆಹರಿಯದ ಮಹದಾಯಿ ಸಮಸ್ಯೆ : ಸೆ.10ಕ್ಕೆ ರೈಲ್ ರೋಖೋ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

vATAL-M

ಬೆಂಗಳೂರು, ಆ.23- ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಉತ್ತರ ಕರ್ನಾಟಕ ವಿಭಾಗದಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿಯದ ಕಾರಣ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕನ್ನಡ ಒಕ್ಕೂಟದ ವತಿಯಿಂದ ಸೆ.10 ರಂದು ರಾಜ್ಯಾದ್ಯಂತ ರೈಲ್ ರೋಕೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದರು.  ಕನ್ನಡ ಒಕ್ಕೂಟದ ವತಿಯಿಂದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆ ಸಮಸ್ಯೆ ಪರಿಹಾರಕ್ಕೆ ನಡೆದ ಸರ್ವ ಪಕ್ಷಗಳ ಸಭೆ ವಿಫಲವಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗ ಕೊಂಡೊಯ್ದು ಪ್ರಧಾನಿ ಬಳಿ ಚರ್ಚಿಸಿ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯಲು ಒತ್ತಾಯಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

ಕುಡಿಯುವ ನೀರಿನ ಸಮಸ್ಯೆಯಾಗಿರು ವುದರಿಂದ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಮಾತುಕತೆ ಮೂಲಕ ಬಗೆಹರಿಸಿಕೊಡಬೇಕು ಎಂದು ಹೇಳಿದರು.  ರಾಜ್ಯ ಸರ್ಕಾರ ಕಾನೂನು ಹೋರಾಟದ ಜೊತೆ ಜೊತೆಯಲ್ಲೇ ಮಾತುಕತೆಯನ್ನೂ ನಡೆಸಬೇಕು ಎಂದು ತಿಳಿಸಿದರು.  ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಯಾವುದೇ ಸಂಸದರು ಚಕಾರವೆತ್ತದಿರು ವುದು ದುರದೃಷ್ಟಕರ ಎಂದು ಹೇಳಿದರು.  ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಮಹದಾಯಿ ಸಮಸ್ಯೆ ಪರಿಹಾರಕ್ಕಾಗಿ ಕನ್ನಡ ಒಕ್ಕೂಟ ಎರಡು ಬಾರಿ ರಾಜ್ಯ ಬಂದ್ ನಡೆಸಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳದಿರು ವುದು ವಿಪರ್ಯಾಸ. ಆದರೂ ನಮ್ಮ ಹೋರಾಟ ನಿಲ್ಲುಸುವುದಿಲ್ಲ. ನಾವು ಮುಂದುವರೆಸುತ್ತೇವೆ. ಸೆ.10 ರಂದು ರಾಜ್ಯಾದ್ಯಂತ ರೈಲು ತಡೆದು ಚಳವಳಿ ಮಾಡುವುದಾಗಿ ತಿಳಿಸಿದರು.

ಕನ್ನಡ ಸೇನೆಯ ಕೆ.ಆರ್.ಕುಮಾರ್, ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ, ಸಾರ್ವಜನಿಕ ಜಾಗೃತಿ ವೇದಿಕೆ ಮಂಜುನಾಥ್ದೇವು, ಗಿರೀಶ್ಗೌಡ, ಪ್ರವೀಣ್ಕುಮಾರ್ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin