ಬಜೆಟ್‍ನಲ್ಲಿ 5 ರಾಜ್ಯಗಳಿಗೆ ಹೊಸ ಯೋಜನೆ ಘೋಷಿಸುವಂತಿಲ್ಲ : ಕೇಂದ್ರಕ್ಕೆ ಆಯೋಗ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Election-Commission

ನವದೆಹಲಿ, ಜ.24-ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್‍ನನ್ನು ಫೆ.1ರಂದು ಮಂಡಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸರ್ಕಾರಕ್ಕೆ ಕೆಲವೊಂದು ಪ್ರಮುಖ ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದಕ್ಕಾಗಿ ಯಾವುದೇ ಕಾರಣಕ್ಕೂ ಚುನಾವಣಾ ನೀತಿ ಸಂಹಿತೆಗಳು ಉಲ್ಲಂಘನೆಯಾಗಬಾರದು ಎಂದು ಆಯೋಗ ಸ್ಪಷ್ಟ ಎಚ್ಚರಿಕೆ ನೀಡಿದೆ. ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳಿಗಾಗಿ ಯಾವುದೇ ಹೊಸ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಿಸಬಾರದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಬಜೆಟ್‍ನಲ್ಲಿ ವಿವರಿಸಬಾರದು, ಮತದಾರರ ಮೇಲೆ ಪ್ರಭಾವ ಬೀರುವಂಥ ಪ್ರಕಟಣೆಗಳು ಮುಂಗಡಪತ್ರದಲ್ಲಿ ಅಡಕವಾಗಿರಬಾರದು ಎಂಬಿತ್ಯಾದಿ ಷರತ್ತುಗಳನ್ನು ಆಯೋಗ ವಿಧಿಸಿದೆ.

ಉತ್ತರಪ್ರದೇಶ, ಪಂಬಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ ಚುನಾವಣಾ ದಿನಾಂಕಗಳು ಘೋಷಣೆಯಾಗಿರುವುದರಿಂದ ಆ ರಾಜ್ಯಗಳಿಗೆ ಸಂಬಂಧಪಟ್ಟ ನೂತನ ಯೋಜನೆ, ಹಣಕಾಸು ಮಂಜೂರಾತಿ ಪ್ರಸ್ತಾಪ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಈ ಸಾಲಿನ ಬಜೆಟ್ ಮುಕ್ತವಾಗಿರಬೇಕು ಎಂದು ಆಯೋಗ ತಿಳಿಸಿದೆ.  ಚುನಾವಣೆಗಳ ಹೊಸ್ತಿಲಿನಲ್ಲಿರುವ ಪಂಚ ರಾಜ್ಯಗಳ ಮತದಾರರನ್ನು ಓಲೈಸುವಂಥ ಯಾವುದೇ ನಿರ್ದಿಷ್ಟ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಬಾರದು ಎಂಬ ಪ್ರಮುಖ ಷರತ್ತು ಆಯೋಗದ ಆದೇಶದಲ್ಲಿದೆ.

ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಹೇಳಿರುವ ಆಯೋಗವು, ಈ ಐದು ರಾಜ್ಯಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ಸಾಧನೆಗಳು ಮತ್ತು ಪ್ರಗತಿಪರ ಕಾರ್ಯಗಳನ್ನು ಯಾವುದೇ ರೀತಿಯಲ್ಲೂ ಕೇಂದ್ರ ಬಜೆಟ್‍ನಲ್ಲಿ ನಮೂದಿಸಬಾರದು ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.  ಐದು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಬಜೆಟ್ ಮುಂದೂಡಬೇಕೆಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೋರಿದ್ದ ಅರ್ಜಿಯನ್ನು ನಿನ್ನೆ ಸುಪ್ರೀಂಕೋರ್ಟ್ ನಿನ್ನೆ ವಜÁಗೊಳಿಸಿ, ಕೇವಲ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮುಂದೂಡಲು ಬರುವುದಿಲ್ಲ ಎಂದು ತಿಳಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin