ಬಡತನ, ಅಸಮಾನತೆ ತೊಲಗಿಸಲು ಪಣ

ಈ ಸುದ್ದಿಯನ್ನು ಶೇರ್ ಮಾಡಿ

 

mysore

ಮೈಸೂರು, ಆ.15-ಬಡತನ, ಅಸಮಾನತೆ, ಜಾತೀಯತೆ ತೊಲಗಿಸಿ. ನಮ್ಮ ದೇಶದಲ್ಲಿ ಕ್ವಿಟ್ ಇಂಡಿಯಾ ಘೋಷಣೆ ಮೊಳಗ ಬೇಕಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಇದೇ ಮೊದಲ ಬಾರಿಗೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ 70ನೇ ಸ್ವಾತಂತ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಬ್ರಿಟಿಷರನ್ನು ದೇಶದಿಂದ ಓಡಿಸಲು ನಾವು ಕ್ವಿಟ್ ಇಂಡಿಯಾ ಚಳವಳಿ ಹೋರಾಟ ಮಾಡಿದ್ದೆವು. ಅದೇರೀತಿ ಬಡತನ, ಅಸಮಾನತೆ, ಅನಕ್ಷರತೆ, ಜಾತೀಯತೆಯನ್ನು ತೊಲಗಿಸಿ ಕ್ವಿಟ್ ಇಂಡಿಯಾ ಘೋಷಣೆ ಮೊಳಗಬೇಕಾಗಿದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ರಾಷ್ಟ್ರದಲ್ಲಿ ಮಹಿಳೆಯರು, ಮಕ್ಕಳು, ರೈತರನ್ನು ಶಕ್ತಿಶಾಲಿಯನ್ನಾಗಿ ರೂಪಿಸುವ ಗುರಿ ಸರ್ಕಾರದ ಬದ್ಧತೆಯಾಗಿದೆ. ಇವರು ಶಕ್ತಿಶಾಲಿಯಾದರೆ ದೇಶ ಸದೃಢವಾಗುತ್ತದೆ. ದೇಶದ ಅಭಿವೃದ್ಧಿಗೆ ಐಕ್ಯತೆ ಕಾರಣವಾಗಿದೆ. ಅಸಮಾನತೆ ತೊಲಗಿದರೆ ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಮೇಯರ್ ಭೈರಪ್ಪ, ಜಿ.ಪಂ. ಅಧ್ಯಕ್ಷೆ ನಯೀಮ್ ಸುಲ್ತಾನ್, ಶಾಸಕ ಜಿ.ಟಿ. ದೇವೇಗೌಡ, ಕಾಡಾ ಅಧ್ಯಕ್ಷ ದಾಸೇಗೌಡ, ಮೂಡಾ ಅಧ್ಯಕ್ಷ ಮೋಹನ್‍ಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಎನ್.ಮೂರ್ತಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin