ಬಡವನ ಮನೆ ದೀಪ ಬೆಳಗಿಸಿದ ಕೆಆರ್‍ಪುರ ಜಯಕರ್ನಾಟಕ ಘಟಕ

ಈ ಸುದ್ದಿಯನ್ನು ಶೇರ್ ಮಾಡಿ

kr-puram

ಕೆ.ಆರ್.ಪುರ, ಜ.7- ಪ್ರಸ್ತುತ ದಿನಗಳಲ್ಲಿ ಗಲ್ಲಿಗೊಂದು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಕೆಲವು ಸಂಘಟನೆಗಳು ಮಾತ್ರ ಸಮಾಜಮುಖಿ ಕೆಲಸ ಮಾಡುತ್ತಿವೆ.  ಇದಕ್ಕೊಂದು ಉದಾಹರಣೆ ಎಂದರೆ ಕೆ.ಆರ್.ಪುರ ಜಯಕರ್ನಾಟಕ ಸಂಘಟನೆ ಎಂದರೆ ತಪ್ಪಾಗದು.  ಬಾಗಲಕೋಟೆ ಜಿಲ್ಲೆಯ ಹುನುಗುಂದ ತಾಲ್ಲೂಕಿನ ಮರವಾಳ ಗ್ರಾಮದ ಮಹೇಶ್ ಕಳೆದ ಐದ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತಾ ಜೀವಿಸುತ್ತಿದ್ದ.  ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸೂರಿ ಅವರು ಶೀಗೆಹಳ್ಳಿ ಸ್ಲಂಗಳಲ್ಲಿ ತುತ್ತು ಅನ್ನಕ್ಕಾಗಿ ಅಲೆದಾಡುತ್ತಿದ್ದ ಮಹೇಶನನ್ನು ವಿಚಾರಿಸಿ ತಮ್ಮ ಸಂಗಡಿಗರೊಂದಿಗೆ ಸೇರಿ ಹುಡುಗನನ್ನು ಶುಚಿಗೊಳಿಸಿ ಮಾನವೀಯತೆ ಮೆರೆದಿದ್ದಾರೆ.  ಅಲ್ಲದೆ, ಹುಡುಗನಿಗೆ ಉತ್ತಮ ಜೀವನ ನಡೆಸಲು ಅನುಕೂಲವಾಗುವಂತೆ ಕೆಲಸಕ್ಕೆ ಸೇರಿಸಿ ಉಳಿದುಕೊಳ್ಳುವ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದಾರೆ.

ಹುಡುಗನನ್ನು ಈ ಸಂಜೆ ಪತ್ರಿಕೆ ಸಂಪರ್ಕಿಸಿದಾಗ ನಮ್ಮ ಗ್ರಾಮದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದೆ. ಆಗ ಸ್ನೇಹಿತರೊಬ್ಬರು ಬೆಂಗಳೂರಿನಲ್ಲಿ ಕೂಲಿ ಹಣ ಹೆಚ್ಚಾಗಿ ನೀಡುತ್ತಾರೆ ಎಂದು ತಿಳಿಸಿದ್ದರಿಂದ ಸೀದ ಬೆಂಗಳೂರಿಗೆ ಬಂದೆ. ಇಲ್ಲಿ ನನಗೆ ಯಾರೂ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.  ಕಷ್ಟಪಟ್ಟು ತುತ್ತಿನ ಅನ್ನ ಸಂಪಾದಿಸುತ್ತಿದ್ದೆ. ಹೀಗೆ ಶೀಗೇಹಳ್ಳಿ ಸ್ಲಂನಲ್ಲಿ ಓಡಾಡುತ್ತಿದ್ದಾಗ. ಸೂರಿ ಅಣ್ಣ ನನ್ನಗೆ ಉತ್ತಮ ಜೀವನ ಕಲ್ಪಿಸಿಕೊಟ್ಟಿದ್ದಾರೆ ಎಂದು ಗದ್ಗಗಿತನಾಗಿ ಹೇಳಿದ.

ಬಡವರಾಗಿ ಹುಟ್ಟುವುದು ತಪ್ಪಲ್ಲ. ಜೀವನ ಸಾಗಿಸಲು ನೂರೆಂಟು ದಾರಿ ಇದೆ. ಯಾವುದಾದರೊಂದು ಒಳ್ಳೆ ದಾರಿ ತೋರಿಸಿಕೊಟ್ಟರೆ ಬಡವನು ಸಹ ಉತ್ತಮ ಬದುಕು ಸಾಗಿಸಬಹುದು ಎಂದು ಅಭಿಪ್ರಾಯಪಟ್ಟರು.  ಜಯ ಕರ್ನಾಟಕ ಸಂಘಟನೆ ಕೆಆರ್‍ಪುರ ಘಟಕದ ವತಿಯಿಂದ ಇದುವರೆಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆಗಳು, ಆಟೋಟ ಸಾಮಾಗ್ರಿಗಳು, ವಿಕಲಚೇತನರಿಗೆ ಸೈಕಲ್, ಮೋಟರ್‍ಸೈಕಲ್, ಜೀವನ ಅನುಕೂಲವಾಗಲು ಅಂಗಡಿ ಇಟ್ಟು ಕೊಡುವುದು ಸೇರಿದಂತೆ ಹಲವು ಸಮಾಜ ಸೇವೆ ಮಾಡಿದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.  ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಸೂಚನೆಗಳಂತೆ ನೆಲ, ಜಲ, ಭಾಷೆಗೆ ದಕ್ಕೆಯಾದರೆ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಕ್ಷೇತ್ರ ಅಧ್ಯಕ್ಷ ಆನಂದ್, ಕಾರ್ಯಾಧ್ಯಕ್ಷ ಮೆಹಬೂಬ್ ಹಾಗೂ ಪದಾಕಾರಿಗಳು ಜೊತೆಯಲ್ಲಿದ್ದು ಒಳ್ಳೆಯ ಕಾರ್ಯಕ್ಕೆ ಸಹಕರಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin