ಬಡವರಿಗೆ ಭೂಮಿ ಕೊಡಿಸಲು ಹೋರಾಟಕ್ಕಿಳಿದ ದೊರೆಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

doreshwami

ಬೆಳಗಾವಿ, ನ.21-ಘನತೆಯಿಂದ ಬಾಳುವಷ್ಟು ಭೂಮಿ, ಗೌರವದಿಂದ ಬದುಕುವಷ್ಟು ವಸತಿ ನೀಡಬೇಕೆಂಬ ಘೋಷಣೆಯೊಂದಿಗೆ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಬಳಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭವಾಗಿದೆ.ರೈತ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿವೆ. ದುಡಿಯಲು ಭೂಮಿ, ನೆರಳಿಗೆ ಸೂರು, ಸಮಾನ ಜೀವನ ನಡೆಸುವ ಹಕ್ಕನ್ನು ಆಳುವ ಸರ್ಕಾರ ನೀಡಬೇಕೆಂಬ ಘೋಷಣೆ ಪ್ರತಿಭಟನೆಯಲ್ಲಿ ಮೊಳಗಿದೆ.

ಸಾಗುವಳಿ ಮಾಡುವ ಜಮೀನು ಸಾಹುಕಾರರ ಕೈಯಲ್ಲಿದೆ. ನಿಜವಾಗಿಯೂ ದುಡಿಯುವ ರೈತರಿಗೆ ತುಂಡು ಭೂಮಿಯೂ ಇಲ್ಲ, ಜೊತೆಗೆ ಸೂರು ಇಲ್ಲ ಎಂದು ಸರ್ಕಾರದ ವಿರುದ್ಧ ದೊರೆಸ್ವಾಮಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಎಲ್ಲರಿಗೂ ಭೂಮಿ, ಸೂರು ನೀಡುವುದನ್ನು ಸರ್ಕಾರ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.ಸಿದ್ದಗೌಡ ಮೋದಗಿ, ಕಲ್ಯಾಣರಾವ್ ಮುಚಳಂಬಿ, ಸುಜಿತ ಮುಳಗುಂದ, ಶ್ರೀನಿವಾಸ್ ತಾಳುಕರ ಹಾಗೂ ರಾಜ್ಯದ ಉದ್ದಗಲದಿಂದ ಬಂದಿದ್ದ ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin