ಬಡವರು,ನಿರ್ಗತಿಕರ ನಡುವೆ ಸಮಾನತೆ : ಬಡತನ ನಿರ್ಮೂಲನೆ ಸಾಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

1

ಮುಂಡಗೋಡ,ಅ.3- ಸಮಾಜದಲ್ಲಿರುವ ಬಡವರು ಹಾಗೂ ನಿರ್ಗತಿಕರು ಸಮಾನತೆಯಿಂದ ಬದುಕಿದರೆ ಮಾತ್ರ ಬಡತನ ನಿರ್ಮೂಲನೆ ಮಾಡಲು ಸಾದ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ನಿನ್ನೆ ಇಲ್ಲಿಯ ನಗರಸಭಾ ಭವನದಲ್ಲಿ ತಾಲೂಕಾಡಳಿತದಿಂದ ಸಾಮಾಜಿಕ ಭದ್ರತೆಯ ವಿದವಾ, ಇಂದಿರಾಗಾಂಧಿ, ವೃದ್ದಾಪ್ಯ, ಸಂದ್ಯಾ ಸುರಕ್ಷಾ ಮತ್ತು ಮನಸ್ವಿನಿ ಸೇರಿದಂತೆ ವಿವಿದ ವೇತನಗಳ ಮಂಜೂರಾತಿ ಪತ್ರ ವಿತರಣಾ ಸಮಾರಂಭದಲ್ಲಿ ಪಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.

ಮಹಾತ್ಮಾಗಾಂದೀಜಿ ಕಂಡಿದ್ದ ಸಮಾನತೆಯ ಕನಸು ನನಸಾಗುತ್ತಿದೆ. ಅರ್ಹ ಪಲಾನುಭವಿಗಳನ್ನು ಗುರುತಿಸಿ ಮನೆ ಮನೆಗೆ ಯೋಜನೆಗಳನ್ನು ತಲುಪಿ ಸುವಂತಹ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಮಾಡಲಾಗುತ್ತಿದೆ. ಮೂಲಭೂತ ಸಮಸ್ಯೆಗಳ ಬಗ್ಗೆ ಬಡತನ ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ತಾಲೂಕಿನಲ್ಲಿ ಸುಮಾರು 1 ಸಾವಿರ ಹಾಗೂ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಜನರನ್ನು ಗುರುತಿಸಿ ಪಿಂಚಣಿ ಪತ್ರ ವಿತರಿಸಲಾಗುತ್ತಿದೆ. ಜನತೆ ನಮಗೆ ಮಾಡಿದ ಆಶಿರ್ವಾದದ ರುಣ ತೀರಿಸುವ ಹೊಣೆಗಾರಿಕೆ ನಮ್ಮದು. ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿದ್ದು. ಅದನ್ನು ನಿಬಾಯಿಸುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ. ಕೇವಲ ಶಾಸಕರು ಜನಪ್ರತಿನಿಧಿಗಳಿಂದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದಿಲ್ಲ.

ಅಧಿಕಾರಿಗಳು ಕೂಡ ಕೈಜೋಡಿಸಿದರೆ ಮಾತ್ರ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬಹುದು ಎಂದರು.ತಹಸೀಲ್ದಾರ ಅಶೋಕ ಗುರಾಣಿ, ಪಪಂ ಅಧ್ಯಕ್ಷ ಮಹ್ಮದರಫೀಕ ಇನಾಮ ದಾರ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಜಿಪಂ ಸದಸ್ಯ ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ, ಜಯಮ್ಮ ಕೃಷ್ಣ ಹಿರೇಹಳ್ಳಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರಾಬರ್ಟ ಲೋಬೊ, ಸದಸ್ಯೆ ರಮಾಬಾಯಿ ಕುದಳೆ, ಸಂಜೀವ ಪಿಸೆ, ಫಕ್ಕೀರಪ್ಪ ಅಂಟಾಳ, ರಾಮಣ್ಣ ಪಾಲೇಕರ, ಲತೀಪ ನಾಲಬಂಧ್, ತಾ.ಪಂ ಸದಸ್ಯ ಜ್ಞಾನದೇವ ಗುಡಯಾಳ, ರಾಧಾಬಾಯಿ ಸಿಂಗನಳ್ಳಿ, ಹುಸೇನಸಾಬ ದುಂಡಸಿ, ಸುನಿತಾ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin