ಬಡ್ಡಿ ಶೋಷಣೆ ತಪ್ಪಿಸಲು ಬದ್ಧ : ಬ್ಯಾಲಹಳ್ಳಿ ಗೋವಿಂದೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

bank-kolara

ಕೋಲಾರ, ಆ.20- ಬಡವರಿಗೆ ದಿನದ ಬಡ್ಡಿ ಶೋಷಣೆ ವಿರುದ್ಧ ಮೆಟ್ಟಿನಿಲ್ಲಲು, ಅಗತ್ಯವಾದ ಆರ್ಥಿಕ ಶಕ್ತಿ ತುಂಬಲು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ಬ್ಯಾಂಕ್  ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.ನಗರದ ನೂರು ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 25 ಸಾವಿರ ರೂ. ಸಾಲ ವಿತರಿಸಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ಹೊಸದಾಗಿ 35 ಸಾವಿರಕ್ಕೂ ಹೆಚ್ಚು ಬಡವರು ಉಳಿತಾಯ ಖಾತೆ ತೆರೆದಿದ್ದಾರೆ. ಉಳ್ಳವರು ನಮ್ಮ ಬ್ಯಾಂಕಿನಲ್ಲಿ ಠೇವಣಿ ಇಡುತ್ತಿಲ್ಲ, ನಮಗೆ ಬಡಜನತೆಯೇ ಜೀವಾಳವಾಗಿದ್ದಾರೆ ಎಂದರು.

 
ಬಡವರಿಗೆ ಸಾಲ ಕೊಟ್ಟರೆ ವಾಪಸ್ ಬರುವುದಿಲ್ಲ ಎಂದು ಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಬಡವರಲ್ಲೇ ಇರುವುದು ಎಂಬ ಸತ್ಯ ಅಂತಹವರಿಗೆ ಗೊತ್ತಿಲ್ಲ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಳಲಿ ಪ್ರಕಾಶ್ ಮಾತನಾಡಿ, ರಸ್ತೆಗಳಲ್ಲಿ ವ್ಯಾಪಾರದಿಂದ ಸಂಚಾರಕ್ಕೆ ತೊಂದರೆ, ಫುಟ್‍ಪಾತ್ ಒತ್ತುವರಿ ಸಂಕಷ್ಟ ಎದುರಾಗುತ್ತಿದೆ, ಈ ವ್ಯಾಪಾರಿಗಳಿಗೆ ಒಂದು ಜಗ ಗುರುತಿಸಿ ವ್ಯಾಪಾರ ಮಳಿಗೆ ಕಟ್ಟಿಕೊಡುವ ಕೆಲಸವಾಗಬೇಕು ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಉರಿಗಿಲಿ ರುದ್ರಸ್ವಾಮಿ, ಹಿರಿಯ ಮುಖಂಡ ರಾಜಣ್ಣ, ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹುಸೇನ್ ದೊಡ್ಡಮುನಿ ಮತಿತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin