ಬತ್ತಿದ ಕೆರೆಗೆ ವ್ಯರ್ಥ ನೀರು : ಕಬ್ಬು ಬೆಳೆಯಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

3

ಮುದ್ದೇಬಿಹಾಳ,ಸೆ.29- ಸದ್ಯಕ್ಕೆ ಕೃಷ್ಣಾ ಜಲಾಶಯ ತುಂಬಿ ಹರಿಯುತ್ತಿರುವುದ ರಿಂದ ವ್ಯರ್ಥ ನೀರು ಹಾಳು ಮಾಡದೇ ಈ ಭಾಗದ ರೈತರ ಅನುಕೂಲಕ್ಕಾಗಿ ಹೆಚ್ಚುವರಿ ನದಿ ನೀರನ್ನು ಕಾಲುವೆಗಳ ಮೂಲಕ ತಾಲೂಕಿನ ಬಹುತೇಕ ಬತ್ತಿಹೋಗಿದ್ದ ಕೆರೆಗಳಿಗೆ ಹರಿ ಬಿಟ್ಟು ತುಂಬಿಸಲಾಗುತ್ತಿದೆ. ಇದರಿಂದ ರೈತರು ಹನಿ ನಿರಾವರಿ ಪ್ರಾರಂಭಿಸಿ ಲಾಭದಾಯಕ ಕಬ್ಬು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆದು ಆ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ರೈತ ಹೋರಾಟಗಾರ ಬಸವರಾಜ ಕುಂಬಾರ ಹೇಳಿದರು. ಅವರು ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಾಯನೇಗಲಿಯ ಸದಾಶಿವ ಸಕ್ಕರೇ ಕಾರ್ಖಾನೆ ಹಾಗೂ ಜೈನ ಹನಿ ನೀರಾವರಿ ಸಂಯುಕ್ತ ಆಶ್ರಯದಲ್ಲಿ ನಿನ್ನೆ ನಡೆದ ಕಬ್ಬು ಬೆಳೆಗಾರರ ಜಾಗೃತ ಸಭೈಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಚಿಮ್ಮಲಗಿ ಏತ ನಿರಾವರಿ ಯೋಜನೆಯ ಕಾಲುವೆಗಳ ಮುಖಾಂತರ ರೈತರ ಹೊಲಗಳಿಗೆ ನೀರು ಹರಿಸಲಾಗುತ್ತದೆ ಎಂದು ಸರಕಾರ ಭರವಸೆ ನೀಡಿತ್ತು. ಆದರೆ ಸದ್ಯಕ್ಕೆ ಗುತ್ತಿಗೆದಾರರು ಬಹುತೇಕ ಕಾಲುವೆಗಳು ಕಳಪೆ ಮಟ್ಟದಲ್ಲಿ ನಿರ್ಮಿಸಿರುವುದರಿಂದ ಅವುಗಳ ಮೂಲಕ ತಮ್ಮ ಕೃಷಿ ಚಟುವಟಿಕೆ ಗಳಿಗೆ ನೀರು ದೊರಕುತ್ತದೆ ಎನ್ನುವ ಆಶಾಭಾವನೆ ಹೊಂದಿದ್ದ ರೈತರಿಗೆ ಸರಕಾರದ ಭರವಸೆಯ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಕಾರಣ ರೈತರ ಶಾಶ್ವತ ಸಮಸ್ಯೆ ಪರಿಹಾರಕ್ಕಾಗಿ ಮಹಾರಾಷ್ಟ್ರ ರಾಜ್ಯದ ಮಾದರಿಯಲ್ಲಿ ಕೆರಗಳನ್ನು ತುಂಬಿಸಿ ಆ ಮೂಲಕ ಈ ಭಾಗದ ಸುಮಾರು 2800 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ರೈತರು ಹನಿ ನಿರಾವರಿ ಪ್ರಾರಂಭಿಸಬಹುದು ಎನ್ನುವ ಯೋಜನೆ ಸರಕಾರದ್ದಾಗಿದೆ. ಜೊತೆಗೆ ರೈತರು ತಾವು ಬಿತ್ತಿದ ಉತ್ತಮ ಬೆಳೆಗೆ ಬೇಕಾಗುವ ಅವಶ್ಯಕ ನೀರನ್ನು ಯಾವಾಗ ಬೇಕು ಆಗ ಪಡೆದುಕೊಳ್ಳಬಹುದಾದ ಅತ್ಯಂತ ಮಹತ್ವ ಪೂರ್ಣ ಯೋಜನೆ ಇದಾಗಿದೆ.

ಈ ಯೋಜನೆಯಿಂದ ಭೂಮಿಯ ಸವಳು ಜವಳು ಆಗದಂತೆ ನೋಡಿಕೊಳ್ಳಬಹುದಾಗಿದೆ. ಅಲ್ಲದೇ ನೀರು ಪೂರೈಕೆ ಸಂದರ್ಭದಲ್ಲಿ ರೈತರಿಗೆ ವಿದ್ಯುತ್ತಿನ ಅವಶ್ಯಕತೆ ಕೂಡ ಬೇಕಾಗುವುದಿಲ್ಲ ಕಾರಣ ರೈತರು ಇಂತಹ ಯೋಜನೆಯ ಲಾಭವನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಹಿರಿಯ ರಾಜಕೀಯ ಮುಖಂಡ ಹೇಮರಡ್ಡಿ ಮಾತನಾಡಿ ರೈತರ ಶ್ರೇಯೋಭಿವೃದ್ದೀಗಾಗಿ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅಂತಹ ಯೋಜನೆಗಳ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ದಿ ಹೊಂದಬೇಕು ಎಂದರು.ಈ ಸಂದರ್ಭದಲ್ಲಿ ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ) ಮಾತನಾಡಿದರು. ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ರೈತ ಹೋರಾಟಗಾರ ಗುರುನಾಥಗೌಡ ಬಿರಾದಾರ, ಸದಾಶಿವ ಶುಗರ್ಸ್‍ನ ವಲಯ ಅಧೀಕ್ಷಕ ರಮೇಶ ಗಂಗರಡ್ಡಿ, ರಮಣ ಮೂರ್ತಿ, ರವೀಂದ್ರ ದೇಸಾಯಿ, ಟಿ ಕನ್ನನ್, ಬನ್ನರಾಜ ಗಲಗಲಿ,ನೀತಿರಾಜ ಪವಾರ, ಸುತ್ತಲಿನ ನೂರಾರು ಜನ ರೈತರು ಭಾಗಿಯಾಗಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin