ಭಾರತದ ವಿರುದ್ಧ ಶ್ರೀಲಂಕಾಗೆ 7 ವಿಕೆಟ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

LONDON, ENGLAND - JUNE 08: Hardik Pandya of India reacts after a dropped catch off his bowling during the ICC Champions trophy cricket match between India and Sri Lanka at The Oval in London on June 8, 2017 (Photo by Clive Rose/Getty Images)

ಕೆನ್ನಿಂಗ್ಟನ್ ಓಮನ್, ಜೂ.8 : ಲಂಡನ್ ನ ಕೆನಿಂಗ್ಟನ್ ಮೈದಾನದಲ್ಲಿ ನಡೆಯುತ್ತಿರುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ 8 ನೇ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 7 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಭಾರತದ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡಿತು.ಗುಣಾ ಮತ್ತು ಮೆಂಡೀಸ್ ಪಾಟ್ನರ್ಶಿಪ್ 159 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಇನ್ನೂ 8 ಬಾಲ್ ಉಳಿದಿರುವಾಗಲೇ ಲಂಕಾ ಗೆಲುವನ್ನು ತನ್ನದಾಗಿಸಿಕೊಂಡಿತು.ಶ್ರೀಲಂಕಾ ಆಟಗಾರರನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್ ಗಳು  ಎಡವಿದರು.

ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ರೋಹಿತ್, ಧೋನಿ ಅರ್ಧ ಶತಕ ಹಾಗೂ ಶಿಖರ್ ಧವನ್(125) ಶತಕದ ನೆರವಿನಿಂದ 321 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.  ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್-ರೋಹಿತ್ ಶರ್ಮ ಮೊದಲ ವಿಕೆಟ್ ಗೆ 138 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದ್ದರು. ನಾಯಕ ಕೊಹ್ಲಿ ಡಕ್ ಔಟ್ ಆದರೆ, ಯುವರಾಜ್ ಸಿಂಗ್ – 7 ರನ್, ಧೋನಿ – 63 , ಹಾರ್ದಿಕ್ ಪಾಂಡ್ಯಾ – 09, ಕೇದಾರ್ ಜಾದವ್ – 25 ರನ್ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿತ್ತು.  ಲಂಕಾ ಪರ ಲಸಿತ್ ಮಾಲಿಂಗಾ 2, ಸುರಂಗ ಲಕ್ಮಲ್ , ನುವಾನ್ ಪ್ರದೀಪ್ , ತಿಸಾರ ಪೆರೆರಾ , ಅಸೆಲ ಗುಣರತ್ನೆ ತಲಾ ಒಂದು ವಿಕೆಟ್ ಪಡೆದರು.

Live Score :

ಭಾರತ : 321/6 (50.0 ov)
ಶ್ರೀಲಂಕಾ : 322/3 (48.4 ov)

ಹೈಲೈಟ್ಸ್  : 
> ಶಿಖರ್ ಧವನ್ ಅದ್ಭುತ ಶತಕ
> ರೋಹಿತ್ ಶಮಾ ಭರ್ಜರಿ ಅರ್ಧ ಶತಕ
> ಆರಂಭಿಕರಾದ ಶಿಖರ್ ಧವನ್ – ರೋಹಿತ್ ಶರ್ಮಾ ಬ್ಯಾಟಿಂಗ್
> ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

shikhar davan

India's Shikhar Dhawan celebrates reaching his half century during the ICC Champions Trophy, Group B match at The Oval, London. (Photo by Nigel French/PA Images via Getty Images)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin