ಬದ್ರಿನಾಥ್ ಮಾರ್ಗದಲ್ಲಿ ಭೂ ಕುಸಿತ : ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ
ಬೆಂಗಳೂರು/ಡೆಹ್ರಾಡೂನ್, ಮೇ 20- ಉತ್ತರಾಖಂಡ್ ಬದ್ರಿನಾಥ್ ವಿಷ್ಣುಪ್ರಯಾಗ್ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ಪಡೆದು ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಮುಖ್ಯಕಾರ್ಯದರ್ಶಿ ಸುಭಾಷ್ ಕುಂಟಿಯಾ ಅವರಿಗೆ ಉತ್ತರಖಂಡ್ನ ಮುಖ್ಯ ಕಾರ್ಯದರ್ಶಿ ಅವರ ಜೊತೆ ಮಾತುಕತೆ ನಡೆಸಿ ರಾಜ್ಯದ ಪ್ರವಾಸಿಗರನ್ನು ರಕ್ಷಣೆ ಮಾಡಲು ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಬೇಕೆಂದು ನಿರ್ದೇಶಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಇಂದು ಹಿರಿಯ ಅಧಿಕಾರಿಗಳ ತಂಡವೊಂದನ್ನು ಉತ್ತರಖಂಡ್ಗೆ ಕಳುಹಿಸಿಕೊಡಲಿದ್ದಾರೆ. ಸಂಜೆ ವೇಳೆಗೆ ಈ ತಂಡ ಡೆಹ್ರಾಡೂನ್ಗೆ ತೆರಳಿ ಬದರೀನಾಥ್ ಮತ್ತು ವಿಷ್ಣುಪ್ರಯಾಗಕ್ಕೆ ತೆರಳಲಿದೆ.
ಅಪಾಯದಲ್ಲಿ ಪ್ರವಾಸಿಗರು:
ಬದರೀನಾಥ್ಗೆ ತೆರಳುವ ದಾರಿಯಲ್ಲಿ ವಿಷ್ಣುಪ್ರಯಾಗದ ಸಮೀಪ ಭೂಕುಸಿತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 15,000 ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಯಾತ್ರಾರ್ಥಿಗೂ ಗಾಯಗಳಾಗಿಲ್ಲ.ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಹಾಗೂ ಗಡಿ ರಸ್ತೆಗಳ ನಿರ್ವಹಣಾ ಮಂಡಳಿ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆ ಮೇಲೆ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಬುಲ್ಡೋಜರ ಗಳು, ಬೃಹತ ಹಿಟಾಚಿಗಳ ಮೂಲಕ ಮಣ್ಣು ಮತ್ತು ಬೃಹತï ಬಂಡೆಗಳನ್ನು ತೆರವುಗೊಳಿಸಲಾಗುತ್ತಿದೆ. 2015ರಲ್ಲಿ ಭಾರಿ ಮಳೆಯಿಂದ ಒರಿಸ್ಸಾದಲ್ಲಿ ಭೂಕುಸಿತವುಂಟಾಗಿ 300 ಮಂದಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS