ಬನಶಂಕರಿಯಲ್ಲಿ ನಿರ್ದೇಶಕ ಪಿ.ಎನ್.ಸತ್ಯ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Satya--01
ಬೆಂಗಳೂರು, ಮೇ 6- ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ನಿರ್ದೇ ಶಕನೆಂದೇ ಬಿಂಬಿಸಿಕೊಂಡಿದ್ದ ಪಿ.ಎನ್.ಸತ್ಯ ಅವರ ಅಂತ್ಯಕ್ರಿ ಯೆಯು ಬನಶಂಕರಿ ಚಿತಾಗಾರ ದಲ್ಲಿಂದು ನೆರವೇರಿತು. ಸತ್ಯನ ಅಂತ್ಯಕ್ರಿಯೆಯಲ್ಲಿ ದರ್ಶನ್, ಎಂ.ಜಿ.ರಾಮಮೂರ್ತಿ, ನಿರ್ದೇಶಕರು, ತಂತ್ರಜ್ಞರು, ಆಪ್ತರು ಪಾಲ್ಗೊಂಡಿದ್ದರು. ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರದಿಂದ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಸತ್ಯ ಅವರು ಹಲವು ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದು ನಿನ್ನೆ ಇಹಲೋಕವನ್ನು ತ್ಯಜಿಸಿದ್ದರು. ಹ್ಯಾಟ್ರಿಕ್ ಹೊಡಿ ಮಗಾ, ಸುಗ್ರೀವಾ, ಡಾನ್, ದಾಸ, ಗೂಳಿ, ಸರ್ದಾರ್ ಸೇರಿದಂತೆ ಸುಮಾರು 16 ಚಿತ್ರಗಳನ್ನು ನಿರ್ದೇಶಿಸಿದ್ದೆ ಅಲ್ಲದೆ ಪಾಗಲ್ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ವಿನೋದ್ ಪ್ರಭಾಕರ್ ನಟಿಸಿದ್ದ ಮರಿಟೈಗರ್ ಚಿತ್ರದಲ್ಲಿ ಅಂತಿಮವಾಗಿ ಬಣ್ಣ ಹಚ್ಚಿದ್ದರು.
ಪಿ.ಎನ್.ಸತ್ಯರ ನಿಧನದಿಂದಾಗಿ ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ನಿರ್ದೇಶಕರನ್ನು ಕಳೆದುಕೊಂಡಂತಾಗಿದೆ.

Facebook Comments

Sri Raghav

Admin