ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 8 ವರ್ಷದ ಹುಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

tiger
ಬನ್ನೇರುಘಟ್ಟ, ಜ.13- ಬಂಡೀಪುರದ ಮಲೆಯೂರು ಅಭಯಾರಣ್ಯದಲ್ಲಿ ಸೆರೆಹಿಡಿಯಲಾಗಿದ್ದ 8 ವರ್ಷದ ಹುಲಿ ಬನ್ನೇರುಘಟ್ಟದಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.  ನಿರ್ಭೀತಿಯಿಂದ ಮಲೆಯೂರು ಅಭಯಾರಣ್ಯದಲ್ಲಿ ಅಡ್ಡಾಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಸೆರೆ ಹಿಡಿದು ನಿನ್ನೆಯೇ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಗಿತ್ತು. ಅರವಳಿಕೆ ಮದ್ದು ನೀಡಿ ಹುಲಿಯನ್ನು ಸೆರೆ ಹಿಡಿದಿದ್ದು, ಸಾಮಾನ್ಯ ಸ್ಥಿತಿಗೆ ಬರುವ ಮೊದಲೇ ಬನ್ನೇರುಘಟ್ಟಕ್ಕೆ ರವಾನಿಸಲಾಗಿತ್ತು.

ನಿಗಾ ಘಟಕದಲ್ಲಿರಿಸಿ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ರವಾನಿಸಬೇಕಾಗಿತ್ತು. ಆದರೆ ದಿಢೀರನೆ ರವಾನಿಸಿದ್ದರಿಂದ ಮೃತಪಟ್ಟಿದೆ. ಅಲ್ಲದೆ ಅರಣ್ಯಾಕಾರಿಗಳ ನಿರ್ಲಕ್ಷ್ಯಕ್ಕೆ ಹುಲಿ ಬಲಿಯಾಯಿತೇ ಎಂಬ ಹಲವು ಅನುಮಾನಗಳು ಮೂಡಿವೆ.  ಹುಲಿ ಸೆರೆ ಹಿಡಿಯುವಾಗ ಕಾಲಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿ ಬಳಲುತ್ತಿತ್ತು ಅದಕ್ಕೆ ಚಿಕಿತ್ಸೆ ನೀಡಲು ಅರವಳಿಕೆ ಮದ್ದು ನೀಡಲಾಗಿತ್ತು. ಅರವಳಿಕೆ ಮದ್ದಿನಲ್ಲಿ ವ್ಯತ್ಯಾಸವಾಗಿ ಸಾವನ್ನಪ್ಪಿರಬಹುದೇ ಎಂದು ಶಂಕಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin