ಬಯಲಾಗುತ್ತಿವೆ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹಂತಕರ ಭಯಾನಕ ರಹಸ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Rudresh-Murderer

ಬೆಂಗಳೂರು,.28-ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಬೇಧಿಸಲು ಸಣ್ಣ ಮಾಹಿತಿಯೊಂದು ಮಹತ್ವದ ಸುಳಿವು ನೀಡಿ ಹಂತಕರ ಪತ್ತೆಗೆ ಸಹಕಾರಿಯಾಗಿದೆ.   ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳು ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದು ಮಹತ್ವದ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಈ ಕಗ್ಗೊಲೆ ಹಿಂದೆ ಮತೀಯ ಸಂಘಟನೆಯೊಂದರ ಕೈವಾಡವಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.  ಬಂಧಿತರಾದ ಮಹಮ್ಮದ್ ಸಾಧಿಕ್ ಅಲಿಯಾಸ್ ಮಜರ್, ಮಜೀಬುಲ್ಲಾ ಅಲಿಯಾಸ್ ಮಜೀಬ್, ವಾಸಿಂ ಮಹಮ್ಮದ್ ಹಾಗೂ ಇರ್ಫಾನ್ ಪಾಷ ಇವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು , ಅವರಿಗೆ ಇರಬಹುದಾದ ಸಂಪರ್ಕಗಳು ಮತ್ತು ಇತರ ಚಟವಟಿಕೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಹಂತಕರ ಪೈಕಿ ಒಬ್ಬಾತ ನಿಷೇಧಿತ ಉಗ್ರಗಾಮಿ ಸಂಘಟನೆ ಅಲ್-ಉಮ್ಮಾ ಸಂಘಟನೆಗೆ ಸೇರಿದವನಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೇರಳ, ತಮಿಳುನಾಡು ಮತು ಕರ್ನಾಟಕದಲ್ಲಿ ನಡೆದ 11 ಮಂದಿ ಆರ್‍ಎಸ್‍ಎಸ್ ಕಾರ್ಯಕರ್ತರ ಕಗ್ಗೊಲೆ ಮಾದರಿಯಲ್ಲೇ ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಹತರಾದ ಎಲ್ಲರಿಗೂ ಕತ್ತಿನ ಬಲಭಾಗಕ್ಕೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಈ ಎಲ್ಲಾ ಕೊಲೆಗಳ ನಡುವೆ ಸಾಮ್ಯತೆ ಇದ್ದು ಹೆಚ್ಚಿನ ತನಿಖೆಯಿಂದ ಇನ್ನಷ್ಟು ಸ್ಫೋಟಕ ಮಾಹಿತಿಗಳು ಲಭಿಸುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಂಟು ನಡಿಗೆ ನೀಡಿದ ಸುಳಿವು:

ಬಂಧಿತ ಆರೋಪಿಗಳೆಲ್ಲರೂ ನಗರದಲ್ಲೇ ಇದ್ದರೂ ಪೊಲೀಸ್ ತಂಡಗಳು ಕೇರಳ, ತಮಿಳುನಾಡು ಮತ್ತು ರಾಜ್ಯದ ಇತರ ಭಾಗಗಳಲ್ಲಿ ತೀವ್ರ ಶೋಧ ನಡೆಸಿ ಬರಿಗೈಯಲ್ಲಿ ಹಿಂದಿರುಗಿದ್ದವು. ಆದರೆ ಈ ಪ್ರಕರಣದ ಸೂಕ್ಷ್ಮ ಸುಳಿವನ್ನು ಬೆನ್ನಟ್ಟಿದ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಲಭಿಸಿ ಹಂತಕರ ಸೆರೆಗೆ ನೆರವಾಯಿತು.  ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 70 ಜನರ ಸಿಬ್ಬಂದಿ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳು ಮತ್ತು ಬೈಕ್ ಸವಾರ ಹಂತಕರ ಚಿತ್ರಗಳೊಂದಿಗೆ ನಗರದ ಪೂರ್ವ ವಿಭಾಗದ ಗಲ್ಲಿಗಲ್ಲಿಗಳಲ್ಲಿ ತೀವ್ರ ಶೋಧ ನಡೆಸಿ ಸ್ಥಳೀಯರಿಂದ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು.

ಸಿಸಿಟಿವಿ ಕ್ಯಾಮೆರಾದಲ್ಲಿ ಹಂತಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೇದೆಯೊಬ್ಬರು ಸ್ವಲ್ಪ ಕುಂಟುತ್ತ ನಡೆಯುತ್ತಿದ್ದ ಹಂತಕ ಮುಜೀಬ್‍ನ ನಡಿಗೆ ಶೈಲಿಯಿಂದಲೇ ಆತನನ್ನು ಗುರುತಿಸುವಲ್ಲಿ ಯಶಸ್ವಿಯಾದರು.  ಈ ಸಣ್ಣ ಸುಳಿವಿನಿಂದ ಮುಜೀಬ್‍ನನ್ನು ಆತನ ಮನೆಯಲ್ಲೇ ಬಂಧಿಸಲಾಯಿತು.  ಹತ್ಯೆ ಮಾಡಿದ ನಂತರ ಹಂತಕರು ಕೆಲವೇ ಕ್ಷಣಗಳಲ್ಲಿ ರಕ್ತಸಿಕ್ತ ಬಟ್ಟೆಗಳನ್ನು ಬದಲಿಸಿ ಏನೂ ಗೊತ್ತಿಲ್ಲದವರಂತೆ ತಮ್ಮ ವೃತ್ತಿಗಳಲ್ಲಿ ದ್ದರು. ಈಗ ಇವರ ಬಂಧನದೊಂದಿಗೆ ಇನ್ನಷ್ಟು ಮಹತ್ವದ ಸಂಗತಿಗಳು ಬೆಳಕಿಗೆ ಬರಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

 

Facebook Comments

Sri Raghav

Admin