ಬರಗಾಲದ ವರದಿ ಕಳುಹಿಸದ ಸರ್ಕಾರದ ವಿರುದ್ಧ ಈಶ್ವರಪ್ಪ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

eshwarappa

ಬಾಗಲಕೋಟೆ, ಅ.20- ರಾಜ್ಯದಲ್ಲಿ ಬರಗಾಲದಿಂದ ಅಂದಾಜು 10 ಸಾವಿರ ಕೋಟಿ ರೂ. ಬೆಳೆ ಹಾನಿಯಾಗಿದ್ದರೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಇನ್ನೂ ವರದಿ ಕಳುಹಿಸಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಆರೋಪಿಸಿದರು. ಬಾಗಲಕೋಟೆ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಿಂದ ರಾಜ್ಯ ತತ್ತರಿಸಿದೆ. 10 ಸಾವಿರ ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿದೆ. ಆದರೂ ಇನ್ನು ಕೇಂದ್ರ ಸರ್ಕಾರಕ್ಕೆ ವರದಿಕಳುಹಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಜಿಲ್ಲಾ ಉಸ್ತುವಾರಿಗಳ ಸಭೆ ಕರೆದು ಬರಗಾಲದ ವಸ್ತುಸ್ಥಿತಿ ಅಧ್ಯಯನಕ್ಕೆ ಸೂಚನೆ ನೀಡಬೇಕು. ತುರ್ತಾಗಿ ರೈತರ ಸಮಸ್ಯೆ ಪರಿಹರಿಸಬೇಕು. ಯಾವುದೋ ಹಣವನ್ನು, ಯಾವುದೋ ಕೆಲಸಕ್ಕೆ ಖರ್ಚು ಮಾಡದೆ ನಿಗದಿತ ಯೋಜನೆಗಳಿಗೆ ಬಳಸಬೇಕೆಂದು ಈಶ್ವರಪ್ಪ ಹೇಳಿದರು.

 

► Follow us on –  Facebook / Twitter  / Google+

Facebook Comments

Sri Raghav

Admin