ಬರಗಾಲವಿದ್ದರೂ ದೇವರ ಭಕ್ತಿಗೆ ಕುಂದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ADURU

ಕಡೂರು, ಫೆ.4- ಭೀಕರ ಬರಗಾಲ ತಾಂಡವವಾಡುತ್ತಿರುವ ನಡುವೆ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಬರಗಾಲವಿದ್ದರೂ ಸಹ ದೇವಾಲಯಗಳ ನಿರ್ಮಾಣ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಜನರಲ್ಲೂ ಸಹ ದೇವರ ಮೇಲಿನ ಭಕ್ತಿ ಕಡಿಮೆ ಯಾಗಿರುವುದಿಲ್ಲವೆಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.  ಬ್ಯಾಗಡೇಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವ, ನೂತನ ಶಿಲಾ ಪ್ರತಿಷ್ಠಾಪನೆ, ವಿಮಾನ ಗೋಪುರ, ಕಳಸಾರೋಹಣ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬರಗಾಲವನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಿ ಸನ್ನದ್ಧರಾಗಬೇಕಿದೆ. ಸರ್ಕಾರ ನೀಡುತ್ತಿರುವ ಬರಗಾಲದ ಹಣ ಯಾತಕ್ಕೂ ಸಾಕಾಗುವುದಿಲ್ಲ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಹಣ ಕೇಳಲಾಗುವುದು. ಹಣ ತಂದರೂ ಸಹ ನೀರಿನ ಮೂಲ ಬೇಕಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಲಕ್ಕಪ್ಪ ಮಾತನಾಡಿ, ಈ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಎರಡು ಗುಂಪುಗಳಾಗಿ ಒಗ್ಗಟ್ಟು ಇಲ್ಲದಾಗಿದೆ. ದೇವಾಲಯದ ಪ್ರಾರಂಭೋತ್ಸವದ ದಿನದಿಂದಲಾದರೂ ಇಂದಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಒಗ್ಗಟ್ಟಿನ ಪ್ರದರ್ಶನ ತೋರಬೇಕಿದೆ ಎಂದು ತಿಳಿಸಿದರು.ತಾ.ಪಂ. ಸದಸ್ಯ ಚಂದ್ರಪ್ಪಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಗ್ರಾಮದ ಜನರಲ್ಲಿ ಹೊಂದಾಣಿಕೆಯ ಮನೋಭಾವ ಇರಬೇಕಿದೆ. ಸರ್ಕಾರದ ಸೌಲಭ್ಯ ಪಡೆಯಲು ಗ್ರಾಮದಲ್ಲಿ ಒಗ್ಗಟ್ಟು ಇರಬೇಕಿದೆ. ರಾಜಕಾರಣ ಚುನಾವಣೆಗಳಲ್ಲಿ ಮಾತ್ರ ಇರಬೇಕಿದೆ. ರಾಜಕಾರಣಕ್ಕಾಗಿ ಹಾಳಾಗುವುದು ಬೇಡ. ಎಲ್ಲಾ ಕಡೆ ಬರಗಾಲವಿದೆ. ಕುಡಿಯುವ ನೀರನ್ನು ಮಿತವಾಗಿ ಬಳಕೆ ಮಾಡಬೇಕೆಂದು ತಿಳಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಗಿರೀಶ್ ಉಪ್ಪಾರ್, ಜಿ.ಪಂ. ಸದಸ್ಯೆ ಕಾವೇರಿ ಲಕ್ಕಪ್ಪ, ತಾ.ಪಂ. ಸದಸ್ಯ ಬಿ.ಎಸ್. ಬಸವರಾಜು, ಎ.ಪಿ.ಎಂ.ಸಿ. ನಿರ್ದೇಶಕ ಓಂಕಾರಪ್ಪ, ಬೀರೂರು ಮಾಜಿ ಅಧ್ಯಕ್ಷ ರಮೇಶ್, ಕೆ.ಹೆಚ್.ಎ. ಪ್ರಸನ್ನ, ಬಿ. ರುದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin