ಬರಗಾಲ ಕಾಮಗಾರಿಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

9

ಗಜೇಂದ್ರಗಡ,ಫೆ.3- ನಿನ್ನೆ ರೋಣ ತಾಲೂಕಾ ಮಾರನಬಸರಿ ಗ್ರಾಮದಲ್ಲಿ 2016-17ನೇ ಸಾಲಿನ ಬರಗಾಲ ಕಾಮಗಾರಿಗೆ ಪ್ರಾರಂಭವಾಗಿದ್ದು ಈ ಕಾಮಗಾರಿಯನ್ನು ಮಾರನಬಸರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಾವಕ್ಕ ಮಾದರ ಹಾಗೂ ಉಪಾಧ್ಯಕ್ಷ ನೇತ್ರಾ ಹೂಗಾರ ಚಾಲನೆ ನೀಡಿದರು.ಈ ಒಂದು ಬರಗಾಲ ಕಾಮಗಾರಿಯಲ್ಲಿ ಮಾರನಬಸರಿ ಗ್ರಾಮದ ರೈತರು ಹಾಗೂ ಸುತ್ತಮುತ್ತಲಿನ ಹಳ್ಳಿಯ ರೈತರು ಸುಮಾರು 700 ಜನರು ಬರಕಾಮಗಾರಿಯಲ್ಲಿ ಭಾಗಿಯಾಗಿದ್ದು, ಬರಕಾಮಗಾರಿಯ ಪ್ರತಿ ದಿವಸದ ಕೂಲಿಯನ್ನು ರೂ 224ರಂತೆ ಪ್ರತಿಯೊಬರಿಗೂ ಬ್ಯಾಂಕಿನ ಮುಖಾಂತರ ಅವರವರ ಖಾತೆಗೆ ಜಮಾ ಮಾಡಲಾಗುವುದು ಎಂದು ಗ್ರಾಮ ಪಂಚಾಯತ್ ಪಿಡಿಓ ಎಸ್ ಆರ್ ಸಂಕನೂರ ಸ್ಪಷ್ಟನೆ ನೀಡಿದರು.
ಬರಗಾಲ ಕಾಮಗಾರಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಈರಪ್ಪ ಮರಡಿ, ಶರಣಪ್ಪ ಸಂತಿ, ಬುದೇಶ ವಣಗೇರಿ, ಮೈಬೂ ಮೊತೇಖಾನ್, ಲಕ್ಷ್ಮವ್ವ ಗುತ್ತೂರ, ಶ್ರೀಮತಿ ನೈರುಜನ ವಾಲಿಕಾರ, ಶಾಂತಮ್ಮ ಜಿಗಳೂರು ಈ ಬರಗಾಲ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin