ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ನಿತ್ಯರೋಗಿಗಳ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

sira

ಶಿರಾ, ಅ.25- ಅಯ್ಯೋ ದೇವರೇ… ಏನು ಇಷ್ಟೊಂದು ದ್ವಿಚಕ್ರ ವಾಹನಗಳು.ಯಾವುದೋ ದ್ವಿಚಕ್ರ ವಾಹನದ ನಿಲುಗಡೆ ಸ್ಥಳ ಎಂದುಕೊಂಡಿರಾ ನಿಮ್ಮ ಊಹೆ ತಪ್ಪು. ಇದು ಶಿರಾ ತಾಲೂಕಿನ ಬರಗೂರು ಪಟ್ಟಣದ ಪ್ರಾಥಮಿಕ ಆರೊಗ್ಯ ಕೇಂದ್ರದ ಆವರಣ.
ಈ ದ್ವಿಚಕ್ರ ವಾಹನಗಳು ಪ್ರತಿ ನಿತ್ಯ ನೂರಾರು ವಾಹನಗಳಲ್ಲಿ ರೋಗಿಗಳನ್ನು ಕರೆದುಕೊಂಡು ಬಂದಿರುವ ವಾಹನಗಳ ಚಿತ್ರಣ. ಸುಮಾರು 150 ಕ್ಕೂಹೆಚ್ಚು ಹಳ್ಳಿಗಳ ಜನತೆಗೆ ಎಕೈಕ ಸಂಜಿವಿನಿ ಕೇಂದ್ರವಾಗಿರುವ ಈ ಆಸ್ಪತ್ರೆಗೆ ದಿನವಹಿ 400 ಕ್ಕೂಹೆಚ್ಚು ರೋಗಿಗಳು ಬರುವುದು ಸಾಮಾನ್ಯವಾಗಿವೆ. ಇರುವ ಒಬ್ಬ ವೈದ್ಯರು ರೋಗಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ವಿಧಿ ಇಲ್ಲದೆ ಜನತೆ ಆರ್‍ಎಂಪಿ ವೈದ್ಯರ ಮೊರೆ ಹೋಗುವುದು ಅನಿವಾರ್ಯವಾಗಿದೆ. ಮಹಿಳಾ ವೈದ್ಯರಿಲ್ಲದೆ ಹೆರಿಗೆಗಾಗಿ ಬರುವ ಮಹಿಳೆಯರ ಪಾಡು ದೇವರೆ ಬಲ್ಲ. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನೋವಿನಲ್ಲೆ ಪಟ್ಟಣಕ್ಕೆ ಹೋಗಬೇಕಾಗುವುದು ಅನಿವಾರ್ಯ. 30 ಕಿಮೀ ದೂರದ ಪಟ್ಟಣದ ಆಸ್ಪತ್ರೆಗೆ ಪಯಣಿಸುವಾಗ ಮಾರ್ಗ ಮಧ್ಯೆ ಸಾಕಷ್ಟು ಪ್ರಾಣ ಹಾನಿಗಳಾದ ಉದಾಹರಣೆಗಳಿವೆ.

ಇಲ್ಲಿನ ರೋಗಿಗಳ ಸಂಕಷ್ಟದ ಹಾಗೂ ಈ ಭಾಗದ ಜನತೆ ಆರೊಗ್ಯ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿರುವ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ , ಈ ಹಿಂದೆಕೆಲವು ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಬರಗೂರು ಆಸ್ಪತ್ರೆ ಯಾವ ಕಾರಣಕ್ಕೆ ನೆನೆಗುದಿಗೆ ಬಿದ್ದಿದೆಯೊ ಎಂಬದು ಯಕ್ಷ ಪ್ರಶ್ನೆಯಾಗಿದೆ. ಉತ್ತಮ ಆರೊಗ್ಯ ಕಾಪಾಡಿಕೊಳ್ಳುವ ಸದುದ್ದೇಶದಿಂದ ಪ್ರಾಥಮಿಕ ಆರೊಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂಬ ಬರಗೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಹಲವು ವರ್ಷಗಳಿಂದ ಬೇಡಿಕೆ ಇದ್ದು ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಆರೊಗ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಆರೊಗ್ಯ ಅವ್ಯವಸ್ಥೆಯ ಬಗ್ಗೆ ಅವಲೋಕಿಸಿ ಪ್ರಾಥಮಿಕ ಆರೊಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಮೂಲಕ ಹಾಗೂ ಪರ್ಯಾಯವಾಗಿ ಮತ್ತೊಬ್ಬ ವೈದ್ಯರ ನೇಮಕ ಮಾಡುವ ಮೂಲಕ ಸಹಾಸ್ರಾರು ರೋಗಿಗಳ ರಕ್ಷಣೆಗೆ ಮುಂದಾಗುವ ಮೂಲಕ ಬರದ ನಾಡಿನ ಜನತೆಯ ಆರೋಗ್ಯ ಕಾಪಾಡುವರೆ?

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin