ಬರದಿಂದ ಬಳಲಿದವರಿಗೆ ವಿದ್ಯುತ್ ಬರೆ, ಪ್ರತಿ ಯುನಿಟ್‍ಗೆ ಸರಾಸರಿ 48 ಪೈಸೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Electricity--------01

ಬೆಂಗಳೂರು, ಏ.11- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍ಸಿ)ವು ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ವಿವಿಧ ಹಂತಗಳಲ್ಲಿ 15 ರಿಂದ 50 ಪೈಸೆ ಸೇರಿದಂತೆ ಪ್ರತಿ ಯುನಿಟ್‍ಗೆ ಸರಾಸರಿ 48 ಪೈಸೆ ದರ ಏರಿಕೆ ಮಾಡಿದೆ.  ಏ.1ರಿಂದಲೇ ಹೊಸ ದರ ಜಾರಿಯಾಗಲಿದ್ದು, ಬೆಸ್ಕಾಂ ಹೊರತುಪಡಿಸಿ ಮೆಸ್ಕಾಂ, ಜೆಸ್ಕಾಂ ಹಾಗೂ ಹೆಸ್ಕಾಂ ಏಕರೂಪ ದರ ಪರಿಷ್ಕರಣೆ ಮಾಡಿದೆ. ಬೆಸ್ಕಾಂ ಕಂಪೆನಿಗಳ ಹೆಚ್ಚುವರಿ ವಿದ್ಯುತ್ ಖರೀದಿ, ಬರಗಾಲ, ಮಳೆಯ ಅಭಾವ, ಜಲವಿದ್ಯುತ್ ಕೊರತೆ, ಕಂದಾಯ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಂದ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಂ.ಕೆ.ಶಂಕರ ಲಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

2015-16ನೆ ಸಾಲಿನಲ್ಲಿ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ವಿದ್ಯುತ್‍ಗಾರದಲ್ಲಿ ಮಳೆ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ.   ರಾಜ್ಯ ಸರ್ಕಾರವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿದ ಪರಿಣಾಮ ವಿದ್ಯುತ್ ಕಂಪೆನಿಗಳಿಗೆ ಕಂದಾಯ ಕೊರತೆ ಎದುರಾಗಿದ್ದು, ದರ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 2015-16ರಲ್ಲಿ 2296 ಕೋಟಿ ರೂ. ಕಂದಾಯ ಕೊರತೆ ಉಂಟಾಗಿದೆ. ಅಲ್ಲದೆ, ಈ ಬಾರಿ ಬರಗಾಲದಿಂದ ರಾಜ್ಯದ ಜಲಾಶಯಗಳು ಖಾಲಿಯಾಗುವುದರ ಜತೆಗೆ ವಿದ್ಯುತ್ ಉತ್ಪಾದನೆಯು ಅನೇಕ ಕಡೆ ಸ್ಥಗಿತಗೊಂಡಿದೆ ಎಂದರು.

ವಿದ್ಯುತ್ ದರ ಪರಿಷ್ಕರಣೆಯು ಬಿಬಿಎಂಪಿ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಗೃಹ ಬಳಕೆ ಗ್ರಾಹಕರು ಪ್ರತಿ ತಿಂಗಳು 30 ಯುನಿಟ್‍ವರೆಗೆ ವಿದ್ಯುತ್ ಬಳಸಿದರೆ 3ರೂ.ನಿಂದ 3.20 ರೂ.ಗೆ ಏರಿಕೆ ಮಾಡಲಾಗಿದೆ. 31 ಯುನಿಟ್‍ನಿಂದ 100 ಯುನಿಟ್‍ವರೆಗೆ ವಿದ್ಯುತ್ ಬಳಸಿದರೆ 4.45ರೂ.ನಿಂದ 4.75 ರೂ., 100 ರಿಂದ 200 ಯುನಿಟ್ ಬಳಸಿದರೆ 5.9ರೂ. ರಿಂದ 6.25ರೂ., 200 ಯುನಿಟ್‍ಗಿಂತ ಮೇಲ್ಪಟ್ಟು ಬಳಸಿದರೆ 6.95 ರೂ.ಯಿಂದ 7.35 ರೂ.ಗೆ ಏರಿಕೆ ಮಾಡಲಾಗಿದೆ ಎಂದರು.

ಬೆಸ್ಕಾಂ ವ್ಯಾಪ್ತಿಯಲ್ಲಿ 201 ರಿಂದ 300 ಯೂನಿಟ್ ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ 6.95 ರೂ.ನಿಂದ 7.30 ರೂ., 301 ರಿಂದ 400 ಯೂನಿಟ್ ಬಳಸಿದರೆ 6.95 ರೂ.ನಿಂದ 7.45 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.  ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಮೊದಲ 30 ಯುನಿಟ್‍ವರೆಗೆ ವಿದ್ಯುತ್ ಬಳಸಿದರೆ 2.95 ರೂ.ನಿಂದ 3.15 ರೂ., 31 ರಿಂದ 100 ಯೂನಿಟ್ ಬಳಸಿದರೆ 4.10 ರೂ.ನಿಂದ 4.60 ರೂ., 101 ರಿಂದ 200 ಯುನಿಟ್ ಬಳಸಿದರೆ 5.65 ರೂ.ನಿಂದ 5.95 ರೂ., 200 ಯುನಿಟ್ ಮೇಲ್ಪಟ್ಟು ಬಳಸಿದರೆ 6.40 ರೂ.ನಿಂದ 6.80 ರೂ.ಗೆ ಏರಿಕೆ ಮಾಡಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ಅರೆನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 201 ರಿಂದ 300 ಯುನಿಟ್ ವರೆಗೆ ವಿದ್ಯುತ್ ಬಳಸಿದರೆ ಪ್ರತಿ ಯುನಿಟ್‍ಗೆ 6.40 ರೂ.ನಿಂದ 6.80 ರೂ., 300ಕ್ಕೂ ಹೆಚ್ಚು ಯುನಿಟ್ ವಿದ್ಯುತ್ ಬಳಸಿದರೆ 6.40 ರೂ.ನಿಂದ 6.80 ರೂ.ಗೆ ಏರಿಕೆ ಮಾಡಲಾಗಿದೆ. ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಕಿಲೋವ್ಯಾಟ್‍ಗೆ 5 ರಿಂದ 10ರೂ.ವರೆಗೆ ಏರಿಕೆ ಮಾಡಲಾಗಿದೆ.

 

ಕೈಗಾರಿಕೆಗಳಿಗೆ ಉತ್ತೇಜನ:

ಕೈಗಾರಿಕೆಗಳು ಹೊರರಾಜ್ಯಗಳಿಗೆ ಹೋಗುವುದನ್ನು ತಡೆಗಟ್ಟಲು, ಉದ್ಯೋಗ ಸೃಷ್ಟಿ ಹಾಗೂ ವಿದ್ಯುತ್ ಉತ್ಪಾದನೆಗೆ ವಿಶೇಷ ಪೆÇ್ರೀತ್ಸಾಹ ನೀಡಲಾಗಿದೆ ಎಂದು ಅವರು ಹೇಳಿದರು.  ಎಚ್‍ಟಿ ಕೈಗಾರಿಕೆ ಮತ್ತು ವಾಣಿಜ್ಯ ಕೈಗಾರಿಕೆಗಳು 1 ಲಕ್ಷಕ್ಕಿಂತ ಹೆಚ್ಚು ಯುನಿಟ್ ಬಳಸಿದರೆ 40 ಪೈಸೆ ಏರಿಕೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಬಳಸುವ ವಿದ್ಯುತ್‍ಗೆ ದಿನದ ಸಮಯ ನಿಗದಿಪಡಿಸಿ ಪ್ರತಿ ಯುನಿಟ್‍ಗೆ 1ರೂ. ಇಳಿಕೆ ಮಾಡಲಾಗಿದೆ. ಎಚ್‍ಟಿ-2(ಎ) ಕೈಗಾರಿಕೆಗಳಿಗೆ 50 ಪೈಸೆ ರಿಯಾಯಿತಿ ನೀಡಲಾಗಿದೆ ಎಂದು ಹೇಳಿದರು.

ಎಲ್‍ಟಿ ಕೈಗಾರಿಕೆ ಬಳಕೆದಾರರು ಬಳಸುವ ವಿದ್ಯುತ್ ದರವನ್ನು ಪ್ರತಿ ಯುನಿಟ್‍ಗೆ 10 ಪೈಸೆಯಿಂದ 20 ಪೈಸೆಗೆ ಏರಿಕೆ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರ ಮಹಾನಗರ ಪ್ರದೇಶಗಳ ಎಲ್‍ಟಿ ಬಳಕೆದಾರರು ಮೊದಲ 500 ಯುನಿಟ್‍ಗಿಂತ ಹೆಚ್ಚಿನ ವಿದ್ಯುತ್ ಬಳಸಿದರೆ ಪ್ರತಿ ಯುನಿಟ್‍ಗೆ 5.20 ರೂ.ನಿಂದ 6.50ರೂ.ಗೆ ಏರಿಸಲಾಗಿದೆ.  ಎಸ್ಕಾಂ ವ್ಯಾಪ್ತಿಯ ಮಹಾನಗರ ಪ್ರದೇಶಗಳಲ್ಲಿ ಮೊದಲ 500 ಯುನಿಟ್ ಬಳಸಿದರೆ 5.10 ರೂ., 501 ರಿಂದ 1000 ಯುನಿಟ್‍ವರೆಗೂ 6.5 ರೂ., ಅದಕ್ಕಿಂತ ಹೆಚ್ಚು ಬಳಸಿದರೆ 6.35 ರೂ. ನಿಗದಿಪಡಿಸಲಾಗಿದೆ.

ಎಲ್ಲ ಪ್ರದೇಶಗಳಲ್ಲೂ ಮೊದಲ 500 ಯುನಿಟ್ ಬಳಸಿದರೆ ಪ್ರತಿ ಯುನಿಟ್‍ಗೆ 5ರೂ., 501ರಿಂದ 1000 ಯುನಿಟ್ ಬಳಸಿದರೆ 5.90 ರೂ., 1000ಕ್ಕಿಂತ ಹೆಚ್ಚು ಬಳಸಿದರೆ 6.20 ರೂ. ನಿಗದಿ ಮಾಡಲಾಗಿದೆ.  ವಾಣಿಜ್ಯ ಬಳಕೆದಾರರಿಗೆ ಪ್ರತಿ ಯುನಿಟ್‍ಗೆ 3.50ರೂ. ಏರಿಕೆ ಮಾಡಲಾಗಿದ್ದು, ಬಿಬಿಎಂಪಿ ಹಾಗೂ ಇತರೆ ನಗರ  ಪ್ರದೇಶಗಳಲ್ಲಿ ಎಲ್‍ಟಿ ವಾಣಿಜ್ಯ ಬಳಕೆದಾರರಿಗೆ ಮೊದಲ 50 ಯುನಿಟ್‍ಗೆ 7.50 ರೂ. ಹಾಗೂ ನಂತರದ ಬಳಕೆಗೆ 8.50ರೂ. ಏರಿಸಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ವಾಣಿಜ್ಯ ಬಳಕೆದಾರರು 50 ಯುನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಪ್ರತಿ ಯುನಿಟ್‍ಗೆ 7 ರೂ., ನಂತರದ ಬಳಕೆದಾರರಿಗೆ 8ರೂ. ನಿಗದಿ ಪಡಿಸಲಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ದರವನ್ನು ಪ್ರತಿ ಯುನಿಟ್‍ಗೆ 3.90 ರಿಂದ 4.25ರೂ.ಗೆ ನಿಗದಿಪಡಿಸಿ ಪ್ರತಿ ಯುನಿಟ್‍ಗೆ 35 ಪೈಸೆ ನಿಗದಿಪಡಿಸಲಾಗಿದೆ.

ಎಚ್‍ಟಿ ಕುಡಿಯುವ ನೀರು ಸರಬರಾಜು ವಿದ್ಯುತ್ ದರವನ್ನು 4.50 ರಿಂದ 4.80ಕ್ಕೆ ನಿಗದಿಪಡಿಸಿ ಪ್ರತಿ ಯುನಿಟ್‍ಗೆ 35 ಪೈಸೆ ಏರಿಕೆ ಮಾಡಲಾಗಿದೆ.
ಎಲ್‍ಇಡಿ ಬಲ್ಪ್‍ಗಳನ್ನು ಹೆಚ್ಚು ಬಳಕೆ ಮಾಡುವಂತೆ ಪ್ರೊತ್ಸಾಹಿಸಲು 1ರೂ. ಕಡಿತಗೊಳಿಸಲಾಗಿದೆ. ಇನ್ನು ಎಲ್‍ಟಿ ವರ್ಗಕ್ಕೆ ಸೇರುವ ಖಾಸಗಿ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬಿಬಿಎಂಪಿ ಇತರೆ ಮಹಾನಗರ ಪ್ರದೇಶ ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ ಮೊದಲ 200 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ ಪ್ರತಿ ಯುನಿಟ್‍ಗೆ 6.50 ರೂ., 200ಕ್ಕಿಂತ ಹೆಚ್ಚು ಬಳಸಿದರೆ 7.75ರೂ. ನಿಗದಿಪಡಿಸಲಾಗಿದೆ.
ಎಚ್‍ಟಿ ಪ್ರವರ್ಗದಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳು, ಚಾರಿಟಬಲ್ ಸಂಸ್ಥೆಗಳು, ಸರ್ಕಾರಿ ವಿದ್ಯಾಸಂಸ್ಥೆಗಳು, ಅನುದಾನಿತ ವಿದ್ಯಾ ಸಂಸ್ಥೆಗಳು 1 ಲಕ್ಷ ಯುನಿಟ್ ಬಳಸಿದರೆ ಯುನಿಟ್‍ಗೆ 6.40ರೂ., ಅದಕ್ಕಿಂತ ಹೆಚ್ಚು ಬಳಸಿದರೆ 6.80ರೂ. ನಿಗದಿಪಡಿಸಿ ಪರಿಷ್ಕರಣೆ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin