ಬರೋಬ್ಬರಿ 600 ಅಡಿ ಎತ್ತರದಲ್ಲಿ ಮದುವೆ ಮಾಡಿಕೊಂಡ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಹಾಪುರ್, ಆ.2-ಹಿಂದಿನ ಜನಪ್ರಿಯ ಹೇಳಿಕೆಯಂತೆ ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಹಡಗಿನಲ್ಲಿ, ವಿಮಾನದಲ್ಲಿ, ಕಾಡಿನಲ್ಲಿ, ಬೆಂಕಿಯಲ್ಲಿ ಮದುವೆ ಮಾಡಿಕೊಳ್ಳುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ.  ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಇಲ್ಲಿನ ಜೋಡಿಯೊಂದು ಗಾಳಿಯಲ್ಲಿ ಮದುವೆ ಮಾಡಿಕೊಂಡ ಸುದ್ದಿಯೊಂದು ಬಂದಿದೆ. ಈ ಜೋಡಿ ಬರೋಬ್ಬರಿ 600 ಅಡಿ ಮೇಲೆ ಅಂತರಿಕ್ಷದಲ್ಲಿ ಹಗ್ಗ ಕಟ್ಟಿಕೊಂಡು ಗಾಳಿಯಲ್ಲಿ ನೇತಾಡುತ್ತ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಂಡು ಮದುವೆಯಾಗಿ ಹೊಸದಾಖಲೆ ಸ್ಥಾಪಿಸಿದ್ದಾರೆ.  ರೋಪ್‍ವೇಗೆ ಹಗ್ಗಗಳನ್ನು ಕಟ್ಟಿಕೊಂಡು ಹೆಣ್ಣು-ಗಂಡು ಇಬ್ಬರೂ ಜಿಗಿದೇ ಬಿಟ್ಟರು.

ಪರಸ್ಪರ ಸಮೀಪಿಸಿದ ಇಬ್ಬರು ಹಾರ ವಿನಿಮಿಯ ಮಾಡಿಕೊಂಡರು. ವೃತ್ತಿಯಲ್ಲಿ ಔಷಧಿ ಅಂಗಡಿ, ಪ್ರವೃತ್ತಿಯಲ್ಲಿ ಪರ್ವತಾರೋಹಿ ಆಗಿರುವ 30 ವರ್ಷದ ಜೈದೀಪ್ ಯಾದವ್ ವರ ಮತ್ತು ಐಎಎಸ್ ಪರೀಕ್ಷೆಗೆ ಸಿದ್ಧತೆಯಲ್ಲಿ ತೊಡಗಿರುವ 25ರ ಹರೆಯದ ರೇಷ್ಟಾ ಪಾಟೀಲ್ ವಧು. ಈ ವಧು-ವರರು ಭಾನುವಾರವಷ್ಟೆ ಕೊಲ್ಹಾಪುರದ ಪಶ್ಚಿಮ ಘಟ್ಟಗಳ ಕಣಿವೆಯಲ್ಲಿ ಗಾಳಿಯಲ್ಲೇ ಹೊಸ ಬಾಳಿಗೆ ಪಾದಾರ್ಪಣೆ ಮಾಡಿದರು.  ಇವರ ಈ ಮದುವೆಗೆ  ಬಂಧು-ಬಾಂಧವರು, ಅಭಿಮಾನಿಗಳು ಕೆಳಗಿನಿಂದಲೇ ಅಕ್ಷತೆ ಎರಚಿ ಶುಭ ಕೋರಿದರು.  ತಮ್ಮ ಮದುವೆ ಒಂದು ದಾಖಲೆಯಾಗಬೇಕು ಎಂದು ಈ ರೀತಿ ತಮ್ಮ ಆಶಯ ವ್ಯಕ್ತಪಡಿಸಿದಾಗ ನಾವು ಅದಕ್ಕೆ ವ್ಯವಸ್ಥೆ ಮಾಡಿದೆವು ಎಂದು ಇಲ್ಲಿನ ವೆಸ್ಟರ್ನ್  ಮೌಂಟೈನ್ ಸ್ಫೋಟ್ರ್ಸ್ ಅಧ್ಯಕ್ಷ ವಿನೋದ್ ಕಾಂಬೋಜ್ ಹೇಳಿದರು.  ಈ ಮದುವೆ ಮುಗಿದು ವಧು-ವರರಿಬ್ಬರೂ ಕೆಳಕ್ಕೆ ಬರುವವರೆಗೂ ನಮಗಂತೂ ತುಂಬಾ ಭಯವಾಗಿತ್ತು ಎಂದು ಕಾಂಬೋಜ್ ಹೇಳಿದರು. ಈ ವಿನೂತನ ಮದುವೆಯಲ್ಲಿ 1,200 ಜನ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರು.

maharashtra-couple-marriage-in-mid-air-600-feet-above-valley

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin