ಬರ್ತಡೇಗೆ ಸೆಕ್ಸ್ ಗಿಫ್ಟ್ ಕೇಳಿದ ಎಂಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Boss

ಬೆಂಗಳೂರು, ಆ.18- ಜನ್ಮದಿನದ ಶುಭಾಶಯಕ್ಕೆ ಬದಲು ಸಂಗಸುಖ ನೀಡುವಂತೆ ತನ್ನ ಕಂಪೆನಿಯ ಮಹಿಳಾ ಸಿಇಒಗೆ ಒತ್ತಾಯಿಸಿದ ಕಾಮುಕ ವ್ಯವಸ್ಥಾಪಕ ನಿರ್ದೇಶಕನೊಬ್ಬ ಬೊಮ್ಮನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.  ತನ್ನ ಬರ್ತ್ಡೇಗೆ ಸೆಕ್ಸ್ ಗಿಫ್ಟ್ ನೀಡುವಂತೆ ಪೀಡಿಸುತ್ತಿದ್ದ ಈ ಚಪಲ ಚನ್ನಿಗರಾಯನ ಹೆಸರು ಜಾನ್ (53). ಲೈಂಗಿಕ ಕಿರುಕುಳ ಆರೋಪದ ಮೇಲೆ ಹೈದರಾಬಾದ್ ಮೂಲದ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಿಟಿಎಂ ಲೇಔಟ್ ಎರಡನೆ ಹಂತದಲ್ಲಿರುವ ಹೆಲ್ತ್ಕೇರ್ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಜಾನ್,  ತನ್ನ ಉದ್ಯಮದ ವ್ಯಾವಹಾರಿಕ ಪಾಲುಗಾರ್ತಿ ಮತ್ತು ಸಿಇಒ ಶಿಲ್ಪಾ (ಹೆಸರು ಬದಲಿಸಲಾಗಿದೆ) ಕೆಲವು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕಚೇರಿಯಲ್ಲಿ ಮತ್ತು ಲಿಫ್ಟ್ನಲ್ಲಿ ತಂಟೆ ಮಾಡುತ್ತಿದ್ದ. ಕಳೆದ ವಾರ ಈತನ ಜನ್ಮದಿನವಿತ್ತು. ತನ್ನ ರೂಮಿನಲ್ಲಿ ಒಂದು ದಿನ ಕಳೆಯುವಂತೆ ಪೀಡಿಸಿದ ಎನ್ನಲಾಗಿದೆ. ಈತನ ಕಾಟದಿಂದ ಬೇಸತ್ತು ಆಕೆ ಪೊಲೀಸರಿಗೆ ದೂರು ನೀಡಿದರು.
ಮುಂದಿನ ತನಿಖೆ ನಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin