ಬರ್ಮುಡಾದ ಡುಪ್ಫಿಗೆ ಸ್ವರ್ಣ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

Barmuda--01

ಗೋಲ್ಡ್‍ಕೋಸ್ಟ್ ,ಏ.5-ಎರಡು ಬಾರಿ ವಿಶ್ವಚಾಂಪಿಯನ್ ವಿಜೇತೆ ಬರ್ಮುಡಾ ಡುಪ್ಫಿ ಇಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಇಂದು ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವಿ ಗೆರೆ ದಾಟುವ ಮೂಲಕ ಈ ವರ್ಷದ ಮೊದಲ ಪದಕ ವಿಜೇತೆ ಎಂಬ ಕೀರ್ತಿಗೆ ಭಾಜನರಾದರು. ಡುಪ್ಫಿ 5 ಕಿಲೋಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ ಲರ್ನ್‍ಮನ್ತ್‍ಗಿಂತ 43 ಸೆಕೆಂಡ್‍ಗಳಿಗಿಂತ ಮುಂಚೆ ಗುರಿ ತಲುಪಿ ಸ್ವರ್ಣ ವಿಜೇತರಾದರೆ, ಕೆನಡಾದ ಜೊನ್ನಾ ಬ್ರೌನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಇಂಗ್ಲೆಂಡ್‍ನ ವಿಕ್ಕಿ ಹಾಲೋಂಡ್ ಕೇವಲ 5 ಸೆಕೆಂಡ್‍ಗಳ ಅಂತರದಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಎಡವಿದರು.

Facebook Comments

Sri Raghav

Admin