ಬರ್ಲಿನ್ ಟ್ರಕ್ ದಾಳಿ ಹೊಣೆ ಹೊತ್ತ ಐಎಸ್ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

Truk-01

ಬರ್ಲಿನ್, ಡಿ.21-ಜರ್ಮನ್ ರಾಜಧಾನಿ ಬರ್ಲಿನನ ಕ್ರಿಸ್‍ಮಸ್ ಮಾರುಕಟ್ಟೆಗೆ ಟ್ರಕ್ ನುಗ್ಗಿಸಿ 12 ಜನರನ್ನು ಬಲಿ ತೆಗೆದುಕೊಂಡ ಕೃತ್ಯಕ್ಕೆ ತಾನೇ ಕಾರಣ ಎಂದು ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆ ಹೇಳಿಕೊಂಡಿದೆ.   ಈ ಕೃತ್ಯಕ್ಕೆ ಸಂಬಂಧಿಸಿದಂತೆ ಜರ್ಮನಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ತೀವ್ರ ತನಿಖೆ ಮುಂದುವರಿದಿರುವಾಗಲೇ ಈ ಘಟನೆಯ ಹೊಣೆಯನ್ನು ಐಎಸ್ ಹೊತ್ತುಕೊಂಡಿದೆ. ಪ್ರವಾಸಿಗಳಿಂದ ಕಿಕ್ಕಿರಿದಿದ್ದ ಕಿಸ್ಮಸ್ ಮಾರುಕಟ್ಟೆಗೆ ವೇಗವಾಗಿ ಟ್ರಕ್ ನುಗ್ಗಿಗೆ ಕೆಲವೇ ಕ್ಷಣಗಳಲ್ಲಿ 12 ಮಂದಿ ಮೃತಪಟ್ಟು, 48 ಮಂದಿ ತೀವ್ರ ಗಾಯಗೊಂಡಿದ್ದರು. .  ಫ್ರಾನ್ಸ್‍ನ ನೈಸ್ ರೆವೀರಾ ನಗರದಲ್ಲಿ ಜುಲೈನಲ್ಲಿ ಇದೇ ರೀತಿ ವೇಗವಾಗಿ ಟ್ರಕ್ ನುಗ್ಗಿಸಿ ನಡೆದ ದಾಳಿಯಲ್ಲಿ ಅನೇಕರು ಮೃತಪಟ್ಟಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin