ಬರ ಅಧ್ಯಯನಕ್ಕೆ ಬಂದ ಕೇಂದ್ರ ತಂಡ : 3 ದಿನಗಳ ಕಾಲ ಪರಿಸ್ಥಿತಿ ಅವಲೋಕನ

ಈ ಸುದ್ದಿಯನ್ನು ಶೇರ್ ಮಾಡಿ

bara

ಬೆಂಗಳೂರು, ನ.2- ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಪರಿಸ್ಥಿತಿ ಅಧ್ಯಯನಕ್ಕಾಗಿ ಇಂದು ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದೆ. ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ನೀರಜಾ ಶಾಸ್ತ್ರಿ ನೇತೃತ್ವದ 10 ಅಧಿಕಾರಿಗಳ ತಂಡ ಒಟ್ಟು ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಭೇಟಿ ನೀಡಿ, ಬರಪೀಡಿತ ಪ್ರದೇಶಗಳ ಅಧ್ಯಯನ ನಡೆಸಲಿದೆ.
ಮೊದಲಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಟಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದು, 4 ದಿನಗಳ ಕಾಲ 3 ತಂಡಗಳು ರಾಜ್ಯದಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿವೆ. ಬರಗಾಲದಿಂದಾಗಿ ಸುಮಾರು 11 ಸಾವಿರ ಕೋಟಿ ನಷ್ಟವಾಗಿರುವ ಅಂದಾಜಿದ್ದು, ಕೇಂದ್ರದಿಂದ ನೆರವು ಪಡೆಯಲು ಈ ಅಧ್ಯಯನ ಪ್ರವಾಸ ಪೂರಕವಾಗಲಿದೆ. ಕೇಂದ್ರ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸಲು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 113 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 23 ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇರುವುದರಿಂದ ನೆರವು ನೀಡಬೇಕೆಂದು ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಕೇಂದ್ರದ ವಿವಿಧ ಅಧಿಕಾರಿಗಳ ತಂಡ ಇಂದಿನಿಂದ ಬರ ಅಧ್ಯಯನ ಪ್ರವಾಸ ಕೈಗೊಂಡಿದೆ. ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಎ. ನೀರಜ್ ನೇತೃತ್ವದಲ್ಲಿ 3 ತಂಡಗಳು ವಿವಿಧ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಲಿವೆ.
ಎಣ್ಣೆ ಬೀಜ ನಿಗಮದ ನಿರ್ದೇಶಕ ಎಸ್. ಎಂ. ಕೊಲ್ಸತ್ರ್ಕ, ವಿದ್ಯುತ್ ನಿಗಮದ ನಿರ್ದೇಶಕ ಕಮಲ್ ಅವರ ನೇತೃತ್ವದ ತಂಡ ಕೂಡ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿ ವರದಿ ಸಿದ್ಧಪಡಿಸಲಿದೆ.

ರಾಜ್ಯದ ಶೇ.80ರಷ್ಟು ಭಾಗ ಬರಕ್ಕೆ ತುತ್ತಾಗಿದ್ದು, ಮತ್ತೆ ಹೊಸದಾಗಿ ಇನ್ನೂ 29 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.ರಾಜ್ಯದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗದ ಜಿಲ್ಲೆಗಳಲ್ಲಿ ನ. 3 ಮತ್ತು 4ರಂದು (ಎರಡು ದಿನ) ಮೂರು ಪ್ರತ್ಯೇಕ ತಂಡಗಳಾಗಿ ಪ್ರವಾಸ ಮಾಡಿ ಸಾಕ್ಷಾತ್ ಸಮೀಕ್ಷೆ ನಡೆಸಲಿದ್ದಾರೆ. ಮೊದಲ ತಂಡವು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ.ಎರಡನೆ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮೂರನೆ ತಂಡವು ಹಾವೇರಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.

ಮಳೆ ಕೊರತೆಯಿಂದ ಈಗಾಗಲೇ ರಾಜ್ಯದ 110ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಆ ಪಟ್ಟಿಗೆ ಇನ್ನೂ 30 ತಾಲೂಕುಗಳು ಸೇರ್ಪಡೆಯಾಗಲಿವೆ.ರಾಜ್ಯದ 176 ತಾಲೂಕುಗಳ ಪೈಕಿ ಶೇ.85ರಷ್ಟು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ.ಬರ ಸ್ಥಿತಿ ಹಿನ್ನೆಲೆಯಲ್ಲಿ 12ಸಾವಿರ ಕೋಟಿ ರೂ.ಗಳಷ್ಟು ಬೆಳೆ ನಷ್ಟ ಸಂಭವಿಸಿದ್ದು, ಮಾರ್ಗಸೂಚಿಯನ್ವಯ 3,500ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. 12 ಸಾವಿರ ಕೋಟಿ ರೂ.ಗಳಷ್ಟು ಫಸಲು ನಷ್ಟವಾಗಿದೆ. 3375 ಕೋಟಿ ಅನುದಾನ ಬಿಡುಗಡೆ ಮಾಡಲು ಕೇಂದ್ರಕ್ಕೆ ಅವಕಾಶವಿದೆ.ಅಕ್ಟೋಬರ್ ಅಂತ್ಯದವರೆಗೆ ಬಂದ ವರದಿ ಆಧಾರದಲ್ಲಿ ಇನ್ನೂ 29 ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ. ರಾಜ್ಯದಲ್ಲಿ ಒಟ್ಟು 139 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿದೆ.ರಾಜ್ಯಕ್ಕೆ ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
2016ರ ಜೂ.1ರಿಂದ ಸೆ.30ರ ವರೆಗೆ ಸಂಪೂರ್ಣ ಮುಂಗಾರು ಮಳೆ ವಿಫಲವಾಗಿದೆ. ಅಕ್ಟೋಬರ್‍ನಲ್ಲಿ ಶೇ.78ರಷ್ಟು ಮಳೆ ಕೊರತೆಯಾಗಿದೆ. ಈ ತಿಂಗಳ ಪೂರ್ತಿ ತೇವಾಂಶದ ಕೊರತೆ ಕಾಡುತ್ತಿದೆ. ಇದರಿಂದ ಈಗಾಗಲೇ ಬೆಳೆದು ನಿಂತಿರುವ ಬೆಳೆಗಳ ಮೇಲೂ ಅಡ್ಡ ಪರಿಣಾಮವಾಗಿದೆ.

ಈ ಮೊದಲು 110 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಜೂ.1 ರಿಂದ ಅ.31ರ ವರೆಗೆ ಮಳೆ ವೈಫಲ್ಯ ಹಾಗೂ ತೇವಾಂಶದ ಕೊರತೆ ಆಧಾರದ ಮೇಲೆ 15 ಜಿಲ್ಲೆಗಳ ಇನ್ನೂ 29 ತಾಲೂಕುಗಳನ್ನು ಹೆಚ್ಚುವರಿಯಾಗಿ ಬರ ಪೀಡಿತ ಎಂದು ಘೋಷಿಸಲಾಗಿದೆ.  ಈ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸುವುದು, ಕುಡಿಯುವ ನೀರು ಸರಬರಾಜು, ಮೇವು ಸರಬರಾಜು, ಜಾನುವಾರು ಸಂರಕ್ಷಣೆಯಂತಹ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಎಸ್‍ಟಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಬೆಳೆನಷ್ಟ ಅಂದಾಜಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಮೊದಲನೇ ತಂಡ:
ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ನೀರಜ್ ಅದಿದಮ್ ನೇತೃತ್ವದ ಮೊದಲ ತಂಡ ನಾಲ್ವರು ಸದಸ್ಯರನ್ನು ಹೊಂದಿದೆ. ಪಶುಸಂಗೋಪನೆ ಸಹಾಯಕ ಆಯುಕ್ತ ಅಶೋಕ್ ಗುಪ್ತಾ, ಹಣಕಾಸು ಜಂಟಿ ನಿರ್ದೇಶಕ ಎಸ್.ಸಿ ಮೀನಾ ತಂಡದ ಸದಸ್ಯರು. ಈ ತಂಡ ಇಂದು ಮತ್ತು ನಾಳೆ ರಸ್ತೆ ಮೂಲಕ ಚಿತ್ರದುರ್ಗ, ಬಳ್ಳಾರಿ ಹಾಗೂ ಕೊಪ್ಪಳ ಮಾರ್ಗವಾಗಿ ಸಾಗಲಿದ್ದು, ನವೆಂರ್ಬ 4 ಮತ್ತು 5ರಂದು ಗದಗ, ಧಾರವಾಡ, ಹಾವೇರಿ, ದಾವಣಗೇರೆ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಲಿದೆ.

ಎರಡನೆ ತಂಡ:
ಆಯಿಲ್ ಸೀಡ್ ಕಾರ್ಪೊರೇಷನ್ ನಿರ್ದೇಶಕ ಎಸ್.ಎಂ. ಕೊಲ್ಹಾತ್ರ್ಕ ಅವರ ಎರಡನೇ ತಂಡದಲ್ಲಿ ನೀರಾವರಿ ಜಂಟಿ ಆಯುಕ್ತ ಸತೀಶ್ ಕುರ್ಮಾ, ಕೇಂದ್ರ ಗ್ರಾಮೀಣಾಭಿವೃದ್ದಿ ಅಪರ ಕಾರ್ಯದರ್ಶಿ ನೀತಾ ಸದಸ್ಯರಾಗಿದ್ದಾರೆ. ಈ ತಂಡ ಇಂದು ಮತ್ತು ನಾಳೆ ಕನಕಪುರ ಮಾರ್ಗವಾಗಿ ರಾಮನಗರ, ಚಾಮರಾಜನಗರದಲ್ಲಿ ಸಂಚರಿಸಲಿದೆ. ನ. 04 ಮತ್ತ 05 ರಂದು ಮೈಸೂರು, ಹಾಸನ, ಮಂಡ್ಯ ಹಾಗೂ ನಾಗಮಂಗಲದಲ್ಲಿ ಬರ ಅಧ್ಯಯನ ನಡೆಸಲಿದೆ.

ಮೂರನೆ ತಂಡ:
ಕೇಂದ್ರ ವಿದ್ಯುತ್ ಇಲಾಖೆ ನಿರ್ದೇಶಕ ಕಮಲ್ ಚೌಹಾನ್ ಅವರ ಮೂರನೇ ತಂಡದಲ್ಲಿ ಎನ್‍ಐಟಿಐ ರಿಸರ್ಚ್ ಅಧಿಕಾರಿ ಗಣೇಶ್ ರಾಮï, ಆಹಾರ ಮತ್ತು ಪೂರೈಕೆ ಜನರಲ್ ಮ್ಯಾನೇರ್ಜ ಐ.ಕೆ ನೇಗಿ ಸದ್ಯಸ್ಯರಾಗಿದ್ದು, ಇಂದು ಮತ್ತು ನಾಳೆ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಸಂಚರಿಸಲಿದೆ. ನ.4 ಮತ್ತು 5 ರಂದು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಲಿದ್ದಾರೆ.

ಸೋಂಪುರಕ್ಕೆ ಬರ ಅಧ್ಯಯನ ತಂಡ

dabaspete

ಡಾಬಸ್ ಪೇಟೆ, ನ.2- ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆ  ವೀಕ್ಷಣೆಗೆ ಪೂರ್ವಭಾವಿಯಾಗಿ ಒಂದು ತಂಡ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯಲ್ಲಿ ಪರಿಶೀಲನೆ ನಡೆಸಿತು.ಕೃಷಿ ಅಧಿಕಾರಿ ಸುಶೀಲಮ್ಮ ಮಾತನಾಡಿ, ಈಗಾಗಲೇ ನಮ್ಮ ತಾಲೂಕಿನಲ್ಲಿ ಮಳೆ ಕಡಿಮೆ ಆಗಿದೆ ಎಂದು ವರದಿ ಸಲ್ಲಿಸಿದ್ದೇವೆ. ನಮ್ಮ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಈಗಾಗಲೇ ಶೇ.95ರಷ್ಟು ಮಳೆ ಬಿದ್ದರೂ ಯಾವುದೇ ರೈತನಿಗೆ ಬೆಳೆ ಸಿಗುವುದಿಲ್ಲ.

dabaspete1
ಈಗಾಗಲೇ ರೈತರು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಬೆಳೆ ಬೆಳೆದ್ದಿದ್ದಾರೆ. ಆ ರೈತನಿಗೆ ಸಹಾಯ ಮಾಡಲು ಸರ್ಕಾರ ನಿರ್ಧರಿಸಿರುವುದರಿಂದ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗೆ ಬೆಳೆ ಪರಿಹಾರ ಕೊಡುವುದರಿಂದ ತಾಲೂಕು ಅಧಿಕಾರಿಗಳು ಈಗಾಗಲೇ ಸರ್ವೆ ನಡೆಸಿದ್ದಾರೆ ಎಂದರು.ನೆಲಮಂಗಲ ತಹಸೀಲ್ದಾರ್ ರಮೇಶ್ ಮಾತನಾಡಿ, ಈಗಾಗಲೆ ನಮ್ಮ ಸರ್ಕಾರ ನೆಲಮಂಗಲ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿದೆ ಎಂದರು.ನೆಲಮಂಗಲ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಮೇಶ್, ಕೃಷಿ ಸಹಾಯಕ ಅಧಿಕಾರಿ ಗಂಗಾಧರ, ಅಗಳಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿದ್ದರಾಜು, ಸದಸ್ಯ ರವಿಕುಮಾರ್, ಮುಖಂಡರಾದ ಗೋವಿಂದರಾಜು, ಸಿದ್ದಪ್ಪ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin