ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ಅಧ್ಯಯನ ಪ್ರವಾಸಕ್ಕೆ ಬ್ರೇಕ್ ಹಾಕಿದ ಸ್ಪೀಕರ್

ಈ ಸುದ್ದಿಯನ್ನು ಶೇರ್ ಮಾಡಿ

Koliwad-01

ಬೆಂಗಳೂರು, ಮೇ 4– ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ಅಧ್ಯಯನ ಪ್ರವಾಸಕ್ಕೆ ಸ್ಪೀಕರ್ ಕೋಳಿವಾಡ ಅವರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇರುವ ಕಾರಣ ಶಾಸಕರು ಪ್ರವಾಸಕ್ಕೆ ತೆರಳಬಾರದು. ಬರ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಕಾಂಗ್ರೆಸ್‍ನ ಸಿದ್ದು ನ್ಯಾಮೇಗೌಡ ನೇತೃತ್ವದಲ್ಲಿ 18 ಶಾಸಕರು ಮೇ 9ರಿಂದ 16ರ ವರೆಗೆ ಎಂಟು ದಿನಗಳ ಕಾಲ ಕೋಲ್ಕತ್ತಾ, ಅಹಮದಾಬಾದ್, ಅಂಡಮಾನ್, ತಿರುವನಂತಪುರಕ್ಕೆ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದರು.ವಿದೇಶಿ ಪ್ರವಾಸದ ಬದಲಾಗಿ ದೇಶದೊಳಗೆ ಪ್ರವಾಸ ಕೈಗೊಳ್ಳುವ ಜಾಣ್ಮೆ ಪ್ರದರ್ಶಿಸಿದರು. ಸಿದ್ದು ನ್ಯಾಮೇಗೌಡ ಅಧ್ಯಕ್ಷತೆಯಲ್ಲಿ ಶಾಸನ ರಚನಾ ಸಮಿತಿ ರಚಿಸಲಾಗಿದ್ದು, ರಾಜಶೇಖರ್, ಬಸವರಾಜ್ ಪಾಟೀಲ್, ದಿನೇಶ್ ಗುಂಡೂರಾವ್, ಎ.ಎಸ್.ಪಾಟೀಲ್ ನಡಹಳ್ಳಿ, ಹಂಪಯ್ಯ ಸಾಹುಕಾರ್ ಬಲ್ಲಟಗಿ, ಎಂ.ಕೆ.ಸೋಮಶೇಖರ್, ಬಿ.ಸುರೇಶ್‍ಗೌಡ, ಬಿ.ಎನ್.ವಿಜಯ್‍ಕುಮಾರ್, ಎಲ್.ಎ.ರವಿಸುಬ್ರಹ್ಮಣ್ಯ, ಎಸ್.ರಘು, ಮಲ್ಲಿಕಾರ್ಜುನ್, ಎಸ್.ಕೂಬಾ, ಜಮೀರ್ ಅಹಮ್ಮದ್ ಖಾನ್, ಹಾಲಾಡಿ ಶ್ರೀನಿವಾಸಶೆಟ್ಟಿ, ಕೆ.ಬಿ.ಪ್ರಸನ್ನಕುಮಾರ್, ಕೆ.ಬಿ.ಶಾಣಪ್ಪ, ಸೋಮಣ್ಣ ಬೇವಿನ ಮರದ್, ಎಂ.ನಾರಾಯಣಸ್ವಾಮಿ, ಕಾಂತರಾಜ್ ಇವರೆಲ್ಲ ಅಧ್ಯಯನ ನೆಪದಲ್ಲಿ ಪ್ರವಾಸಕ್ಕೆ ತೆರಳಲು ಮುಂದಾಗಿದ್ದರು.

ಸ್ಪೀಕರ್ ಅವರು ಅನುಮತಿಯನ್ನೂ ನೀಡಿದ್ದರು. ಬರದ ಹಿನ್ನೆಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ತಾತ್ಕಾಲಿಕವಾಗಿ ಪ್ರವಾಸಕ್ಕೆ ಬ್ರೇಕ್ ಹಾಕಿದ್ದು, ಅಧಿವೇಶನ ಮುಗಿದ ನಂತರ ಈ ಬಗ್ಗೆ ಚಿಂತನೆ ನಡೆಸುವುದಾಗಿ ಕೋಳಿವಾಡ ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin