ಬರ ವೀಕ್ಷಣೆಗೆ ಪ್ರಧಾನಿ ಮೋದಿಯವರೇ ಬರಲಿ : ಸಚಿವ ಆಂಜನೇಯ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

anjanayya
ಬೆಂಗಳೂರು, ನ.2-ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ರೈತರ ಜಮೀನುಗಳನ್ನು ಖುದ್ದು ವೀಕ್ಷಣೆ ಮಾಡಲು ಆಗಮಿಸಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನದಿ, ಕೆರೆ, ಜಲಾಶಯಗಳಲ್ಲಿ ನೀರಿಲ್ಲ. ಜಾನುವಾರು, ಪಕ್ಷಿ ಸೇರಿದಂತೆ ಜೀವ ಸಂಕುಲವೇ ಸಂಕಷ್ಟದಲ್ಲಿದೆ. ಬೆಳೆ ನಾಶ, ಬೆಲೆ ಕುಸಿತದಿಂದಾಗಿ ರೈತರು ಕೂಡ ಸಂಕಷ್ಟದಲ್ಲಿರುವುದರಿಂದ ಮೋದಿಯವರು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್‍ಪುಟ್ ಸಬ್ಸಿಡಿ ನೀಡಬೇಕು, ಪ್ರತಿಯೊಬ್ಬ ರೈತನ ಜಮೀನಿನ ಬೆಳೆ ಪರಿಸ್ಥಿತಿ ಬಗ್ಗೆ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರ ತೆಗೆಯುವ ಕಾರ್ಯ ನಡೆಸಲಾಗುತ್ತಿದೆ. ಇದನ್ನು ಪರಿಶೀಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಚಿವರು ಹೇಳಿದರು.ಶತ್ರುಗಳ ನುಸುಳುವಿಕೆ ಸಂದರ್ಭದಲ್ಲಿ ಒನಕೆ ಓಬವ್ವ ಒನಕೆಯಿಂದ ಶತ್ರುಗಳನ್ನು ಹತ್ಯೆ ಮಾಡಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದಳು. ಆದರೀಗ ಬಿಜೆಪಿಯವರು ಪ್ರತಿಭಟನೆಗೆ ಆಯುಧ ಬಳಸುತ್ತಿರುವುದು ಸರಿಯಲ್ಲ. ಇದು ಸಂವಿಧಾನ ಬಾಹಿರವಾಗಿದೆ.

ಚಳವಳಿ, ಪ್ರತಿಭಟನೆ ನಡೆಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಆಯುಧ ಹಿಡಿದು ಪ್ರತಿಭಟಿಸುವುದು ಸರಿಯಲ್ಲ. ಬಿಜೆಪಿಯವರು ಒನಕೆ ಹಿಡಿದು ಪ್ರತಿಭಟಿಸಿದರೆ, ಬೇರೆಯವರು ಬೇರೊಂದು ಆಯುಧ ಹಿಡಿದು ಪ್ರತಿಭಟನೆಗೆ ಮುಂದಾಗುವ ಸಾಧ್ಯತೆ ಇದೆ. ಈ ರೀತಿ ಪ್ರತಿಭಟನೆ ಮಾಡುವ ಮೂಲಕ ಒಂದು ಧರ್ಮದ ಭಾವನೆ ಕೆರಳಿಸಬಾರದು. ದೇಶದ ಏಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ನಡೆದುಕೊಳ್ಳಬೇಕು ಎಂದರು.ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ, ಧರ್ಮದ ಸೋಂಕಿಲ್ಲದೆ ಒಗ್ಗಟ್ಟಿನಿಂದ ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ದಕ್ಕಿತು ಎಂಬುದನ್ನು ಸ್ಮರಿಸಿದರು.

► Follow us on –  Facebook / Twitter  / Google+

 

Facebook Comments

Sri Raghav

Admin