ಬಲಿಜ ಸಮಾವೇಶಕ್ಕೆ ಸಾಕ್ಷಿಯಾದ ಮೂರೂ ಪಕ್ಷಗಳ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Balija--01

ಬೆಂಗಳೂರು, ಮೇ 28- ನಗರದ ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಲಿಜ ಬೃಹತ್ ಸಮಾವೇಶಕ್ಕೆ ಮೂರು ಪಕ್ಷಗಳ ನಾಯಕರು ಸಾಕ್ಷಿಯಾದರು. ಸಮಾವೇಶಕ್ಕೆ ಬಲಿಜ ಜನಾಂಗದ ಮಹಾಪೂರವೇ ಹರಿದು ಬಂದಿದ್ದು, ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಒಟ್ಟಿಗೆ ಆಸೀನರಾಗಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯ ಅವರು ವೇದಿಕೆಗೆ ಬರುತ್ತಿದ್ದಂತೆ ಸಮಾವೇಶದಲ್ಲಿ ನೆರೆದಿದ್ದವರು ಶಿಳ್ಳೇ ಹಾಕಿ, ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದೇ ವೇಳೆ ಗೌಡರು ಮತ್ತು ಸಿದ್ದರಾಮಯ್ಯ ಅವರು ಅಕ್ಕಪಕ್ಕದಲ್ಲಿ ಕೂತು ಮಾತುಕತೆಯಲ್ಲಿ ತೊಡಗಿದ್ದು ಕಂಡುಬಂತು.ಸಂಸದ ಪಿ.ಸಿ.ಮೋಹನ್ ನೇತೃತ್ವದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಆಯೋಜಿಸಿರುವ ಈ ಸಮಾವೇಶದ ಸಾನ್ನಿಧ್ಯವನ್ನು ಕೋಟಿಲಿಂಗೇಶ್ವರ ದೇವಾಲಯದ ಶ್ರೀ ಸಾಂಬಾಸದಾಶಿವ ಸ್ವಾಮೀಜಿ ವಹಿಸಿದ್ದರು. ಪಕ್ಷಾತೀತವಾಗಿ ಬಹಳಷ್ಟು ನಾಯಕರು, ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

ಶಾಸಕರಾದ ಆರ್.ವಿ.ದೇವರಾಜ್, ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್, ತಾರಾಅನುರಾಧ, ಬಿ.ಜೆ.ಪುಟ್ಟಸ್ವಾಮಿ, ಲೇಹರ್‍ಸಿಂಗ್, ಮಾಜಿ ಶಾಸಕರಾದ ಎ.ನಾಗರಾಜ್, ಪಾಪರೆಡ್ಡಿ, ಸರ್ಕಾರದ ನಿವೃತ್ತ ಕಾರ್ಯದರ್ಶಿ ರವೀಂದ್ರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin