ಬಲಿದಾನ ನೆನೆದು ಅಭಿವೃದ್ಧಿಯತ್ತ ಸಾಗಿ

ಈ ಸುದ್ದಿಯನ್ನು ಶೇರ್ ಮಾಡಿ

melukote

ಮೇಲುಕೋಟೆ, ಆ.16- ಹಿರಿಯರು ಸ್ವಾತಂತ್ರಕ್ಕಾಗಿ ನೀಡಿದ ಬಲಿದಾನ ನೆನೆದು ಅವರ ಆಶಯದಂತೆ ನಡೆದರೆ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ ಇಂದಿನ ಮಕ್ಕಳು ಇದನ್ನು ರೂಢಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ ಭಟ್‍ತಿಳಿಸಿದರು.ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಆಯೋಜಿಸಿದ್ದ 70ನೇ ಸ್ವಾತಂತ್ರೋತ್ಸವದಲ್ಲಿ ಮಾತನಾಡಿದ ಅವರು, ಸ್ವಚ್ಛತೆಯ ಕಡೆಗೆ ಮೇಲುಕೋಟೆ ಸಾಗಬೇಕಿದೆ, ನಮ್ಮ ಮನೆ, ಬೀದಿ, ಶಾಲೆ ಹಾಗೂ ಸ್ಮಾರಕಗಳು ಸ್ವಚ್ಛವಾಗಿಡಬೇಕೆಂಬ ಪಣವನ್ನು ಗ್ರಾಪಂ ತೊಟ್ಟಿದೆ. ನಾವೇ ಪತ್ರ್ಯೇಕವಾಹನ ಖರೀದಿಸಿ ಪ್ರತಿನಿತ್ಯ ಸ್ವಚ್ಚತೆ ಜೊತೆಗೆ ಕಸವಿಲೇವಾರಿ ಮಾಡುತ್ತೇವೆ. ಮೇಲುಕೋಟೆ ನಾಗರಿಕರು, ಪ್ರವಾಸಿಗರು ನಮ್ಮೊಡನೆ ಸಹಕಾರ ನೀಡಬೇಕು ಎಂದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಕೆ.ಬಿ.ಗೋಪಾಲ್ ಮತ್ತು ಪಿ.ಹೆಚ್.ಡಿ ಪಡೆದ ಸುನಿಲ್‍ರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಿದರೆ, ದಿವಂಗತ ಮಲ್ಲಶೆಟ್ಟರ ನೆನಪಲ್ಲಿ ಅವರ ಪುತ್ರ ಸೋಮಶೇಖರ್ ಮತ್ತು ಕುಟುಂಬ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ಮೂರನೇ ಸ್ಥಾನ ಪಡೆದ ಯದುಶೈಲಾ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.ಗ್ರಾ.ಪಂ ಉಪಾದ್ಯಕ್ಷರಾದ ಮಮತಾ, ಸದಸ್ಯರಾದ ಅವ್ವಗಂಗಾ, ಬಲರಾಮೇಗೌಡ, ಲಕ್ಷ್ಮಮ್ಮ, ಇತರ ಸದಸ್ಯರು, ಪಿ.ಡಿ.ಒ ಶೈಲಜಾ, ಮುಖ್ಯಶಿಕ್ಷಕರಾದ ಅಣ್ಣೇಗೌಡ, ಶಿವರಾಮು, ಸಂತಾನರಾಮನ್, ಎಸ್.ಬಿ ಎಂ ವ್ಯವಸ್ಥಾಪಕ ವೆಂಕಟಾಚಲಪತಿ, ಬಾಲಕರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಂಡು, ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಬಾಲಕರ ಶಾಲೆ : ಇಲ್ಲಿನ ಶತಮಾನದ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 70ನೇ ಸ್ವತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ್ ದ್ವಜಾರೋಹಣ ನೆರವೇರಿಸಿದರು. ಶಾಲಾವರಣವನ್ನು ತಳಿರು ತೋರಣಳಿಂದ ಸಿಂಗರಸಿ ಆಕರ್ಷಕ ಭಾರತದ ನಕ್ಷೆ ಬಿಡಿಸಲಾಗತ್ತು, ರಂಗಕರ್ಮಿ ಗಿರೀಶ್, ಮುಖ್ಯ ಶಿಕ್ಷಕ ಸಂತಾನರಾಮ್, ಶಿಕ್ಷಕರಾದ ಮಹಾಲಕ್ಚ್ಮಿ, ಜಯಂತಿ, ಸ್ವಯಂಸೇವಕ ಶಿಕ್ಷಕಿಯರಾದ ರಶ್ಮಿ, ಶಾಂಭವಿ, ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin