ಬಲಿಷ್ಠ ಭಾರತದ ಬೆನ್ನೆಲುಬು ನಮ್ಮ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

art

ಯಾವುದೇ ದೇಶದ ಒಟ್ಟಾರೆ ಪ್ರಗತಿ ಹಾಗೂ ಅಭಿವೃದ್ಧಿಯ ಪಥದಲ್ಲಿ ಆರ್ಥಿಕ ಸ್ಥಿತಿಗತಿ ಒಂದು ಪ್ರಧಾನ ಭೂಮಿಕೆಯಾಗಿರುವಂತೆ ರಾಜ್ಯಗಳ ಸಂಪನ್ಮೂಲ-ಸಮೃದ್ಧಿಯೊಂದಿಗೆ ಎಲ್ಲ ರಾಜ್ಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕೊಡುಗೆಗಳು ಪ್ರಬುದ್ಧ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿವೆ. ಮಾನವ ಸಂಪನ್ಮೂಲ ಶಕ್ತಿಯಲ್ಲಿ ವಿಶ್ವದ ಎರಡನೇ ದೊಡ್ಡ ರಾಷ್ಟ್ರವಾಗಿರುವ ಭಾರತ ಜಾಗತಿಕ ಮಟ್ಟದಲ್ಲಿ ಇಂದು ತನ್ನ ಸಂಸ್ಕøತಿ ಹಿರಿಮೆಯೊಂದಿಗೆ ಗುರುತಿಸಿಕೊಂಡಿದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೂಲಕ ಭಾರತವನ್ನು ನೋಡುವ ದೃಷ್ಟಿಕೋನ ಸೃಷ್ಟಿಯಾಗಿದೆ.
ಕರ್ನಾಟಕ ಹಲವಾರು ವಿಚಾರಗಳಲ್ಲಿ ದೇಶಕ್ಕೆ ನೀಡುತ್ತಿರುವ ಕೊಡುಗೆ ಪ್ರಮುಖ ಘಟ್ಟವಾಗಿದ್ದರೂ, ಕಾವೇರಿ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಮಾತ್ರ ರಾಜ್ಯಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ  ಹೆಸರಾದ ಭಾರತದಲ್ಲಿ ಪ್ರಜೆಯೇ ಪ್ರಭು. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಒಗ್ಗೂಡುವಿಕೆ ಪರಸ್ಪರ ಸಹಕಾರ ಬೆಂಬಲ, ಕೇಂದ್ರದ ಬೆಂಗಾವಲು
ದೇಶದ ಅಭ್ಯುದಯಕ್ಕೆ ಪೂರಕವಾಗಿದೆ. ಹಾಗಿದ್ದು ಇಷ್ಟೆಲ್ಲ ನಿರಾಧಾರವೇಕೆ ಎಂಬ ಪ್ರಶ್ನೆ ತಳುಕು ಹಾಕುತ್ತಲೇ ಇದೆ.  ಇನ್ನು ಅಂಕಿಅಂಶಗಳ ಪ್ರಕಾರ ಹೇಳಬೇಕೆಂದರೆ, ಭಾರತದ ಒಟ್ಟು ರಫ್ತು ಕ್ಷೇತ್ರದ ಶೇ.69ರಷ್ಟು ಪಾಲನ್ನು ದೇಶದ ಪ್ರಮುಖ 5 ರಾಜ್ಯಗಳೇ ನಿರ್ವಹಿಸುತ್ತ್ತಿವೆ. ಅದರಲ್ಲಿ ಕರ್ನಾಟಕವೂ ಒಂದೆಂಬುದು ದೇಶದ ಮುನ್ನಡೆಯಲ್ಲಿ ರಾಜ್ಯದ ಪಾತ್ರವನ್ನು ಪ್ರಮಾಣೀಕರಿಸುತ್ತದೆ. 2007-08 ಹಾಗೂ 2014-15ರ ಸಾಲಿನಲ್ಲಿ ರಾಜ್ಯಗಳ ರಫ್ತು ನಿರ್ವಹಣೆ ಕುರಿತು ನಡೆಸಿದ ವರದಿಯೊಂದರ ಪ್ರಕಾರ ಈ ಅಂಕಿಅಂಶ ಸಿದ್ದಗೊಂಡಿದೆ.
ಭಾರತದ 10 ಶ್ರೀಮಂತ ರಾಜ್ಯಗಳ ಪೈಕಿ ಕರ್ನಾಟಕ 6ನೇ ಸ್ಥಾನದಲ್ಲಿದ್ದರೆ, ರಾಜ್ಯದ ಜಿಡಿಪಿ ದರ 7.02 ಲಕ್ಷ ಕೋಟಿ ( 100 ಶತಕೋಟಿ ಡಾಲರ್) ಹೊಂದಿದೆ. ಇದು ಸಹ ರಾಷ್ಟ್ರದ ಎಲ್ಲ ಬೆಳವಣಿಗೆಗಳಲ್ಲಿ ರಾಜ್ಯದ ಪಾತ್ರವನ್ನು ನಿರ್ಧರಿಸಿದೆ.

ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಉದ್ಯಮಗಳು ರಾಜ್ಯದಲ್ಲಿ ನೆಲೆ ಕಂಡುಕೊಂಡಿರುವುದಷ್ಟೇ ಅಲ್ಲದೆ ದೇಶದ ಒಟ್ಟಾರೆ ವೈಮಾನಿಕ ಕ್ಷೇತ್ರದ ವ್ಯವಹಾರಗಳಲ್ಲಿ ಶೇ.65ರಷ್ಟನ್ನು ಬೆಂಗಳೂರು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

ಕರ್ನಾಟಕ ಉತ್ಪಾದನಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ಸಾರ್ವಜನಿಕರ ಕ್ಷೇತ್ರದ ಉದ್ದಿಮೆಗಳಲ್ಲಿ ಅದರಲ್ಲೂ ಹಿಂದೂಸ್ಥಾನ್ ಏರೋನಾಟಿಕ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಭಾರತ್ ಹೆವಿ ಎಲೆಕ್ಟ್ರೀಕಲ್ಸ್, ಭಾರತ್ ಅರ್ಥ್ ಮೂವರ್ಸ್, ಎಚ್‍ಎಂಟಿಯಂತಹ ಪ್ರಮುಖ ಕಂಪನಿಗಳು ಬೆಂಗಳೂರಿನಲ್ಲಿ ಸ್ಥಾನಗಳಿಸಿವೆ.  ಭಾರತದ ಪ್ರಮುಖ ವಿಜ್ಞಾನ-ತಂತ್ರಜ್ಞಾನದ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್, ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್‍ಟಿಟ್ಯೂಷನ್, ಭಾರತ್‍ಹೆವಿ ಎಲೆಕ್ಟ್ರಿಕಲ್ಸ್ ಸೆಂಟ್ರಲ್ ಟೆಕ್ನಾಲಜಿಯ ರಿಸರ್ಚ್ ಇನ್ಸ್‍ಟಿಟ್ಯೂಟ್ ಮಂಗಳೂರು ರಿಫೈನರಿ ಮತ್ತು ಪೆಟ್ರೊ ಕೆಮಿಕಲ್ ಲಿಮಿಟೆಡ್ ಮತ್ತು ಆಯಿಲ್ ರಿಫೈನರಿಗಳು ಕರ್ನಾಟಕದ ಕೇಂದ್ರ ಬಿಂದುಗಳು ಇತ್ತೀಚೆಗೆ ಇಸ್ರೋ ಕೈಗೊಂಡಿರುವ ಬ್ಯಾಹ್ಯಾಕಾಶ ಕ್ಷೇತ್ರದ ಸಂಶೋಧನೆಗಳು ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ.

1998ರಿಂದ ಕರ್ನಾಟಕ ಇನ್‍ಫಾರ್‍ಮೇಷನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಮುಂಚೂಣಿಯಲ್ಲಿದೆ. ಸಾಕಷ್ಟು ಸಾಫ್ಟ್‍ವೇರ್ ಕಂಪನಿಗಳು ರಾಜ್ಯದಲ್ಲಿದ್ದು ಇನ್‍ಫೋ ಸಿಸ್ ಮತ್ತು ವಿಪ್ರೊತಹ ಅತಿದೊಡ್ಡ ಕಂಪನಿಗಳ ಕೇಂದ್ರ ಕಚೇರಿ ಇಲ್ಲಿ ನೆಲೆಗೊಂಡಿದೆ. ಇದರೊಂದಿಗೆ ರಾಜ್ಯ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತವನ್ನು ಮುನ್ನೆಲೆಗೆ ತಂದಿದ್ದು, 158 ರಾಷ್ಟ್ರಗಳ 320 ಬಯೋ ಟೆಕ್ನಾಲಜಿ ಉದ್ದಿಮೆಗಳು ಕರ್ನಾಟಕದಲ್ಲೇ ಸ್ಥಾನ ಪಡೆದಿದೆ. ದೇಶದ ಒಟ್ಟಾರೆ ಪುಷ್ಟೋದ್ಯಮದಲ್ಲಿ ರಾಜ್ಯದ ಪಾತ್ರ ಶೇ.75ರಷ್ಟು ಹೊಂದಿದ್ದು ಹೂ ಮತ್ತು ಅಲಂಕಾರಿಕ ಗಿಡಗಳನ್ನು ವಿಶ್ವಕ್ಕೆ ರಫ್ತು ಮಾಡುತ್ತಿದೆ.  ಏಳು ಬ್ಯಾಂಕ್‍ಗಳು ರಾಜ್ಯದಲ್ಲೇ ಜನ್ಮ ತಳೆದಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳಾಗಿ ಹೆಸರು ಮಾಡಿರುವುದು ಒಂದೆಡೆಯಾದರೆ

ರಾಷ್ಟ್ರೀಯ ಅಂದಾಜಿನಂತೆ ಪ್ರತಿ 16 ಸಾವಿರ ಜನರಿಗೆ ಒಂದು ಶಾಖೆ ಇರಬೇಕಾದರೂ ನಮ್ಮ ರಾಜ್ಯದಲ್ಲಿ 11 ಸಾವಿರ ಮಂದಿಗೆ ಒಂದು ಶಾಖೆಯಿದೆ. ಕರ್ನಾಟಕದಾದ್ಯಂತ 4.767 ವಿವಿಧ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಇದು ನಮ್ಮ ವಾಣಿಜ್ಯ-ವಹಿವಾಟಿನ ಹೆಗ್ಗಳಿಕೆ  ಬೆಂಗಳೂರಿನಲ್ಲಿ ಇಂಟರ್‍ನ್ಯಾಷನಲ್ ಏರ್‍ಪೊರ್ಟ್ ಇರುವುದರೊಂದಿಗೆ ಬೆಂಗಳೂರು ಭಾರತದ ಒಟ್ಟಾರೆ ವೈಮಾನಿಕ ಕ್ಷೇತ್ರದ ವ್ಯವಹಾರದಲ್ಲಿ ಶೇ.65ರಷ್ಟು ಪಾಲುದಾರಿಕೆ ಹೊಂದಿದೆ ಎಂಬುದು ಮತ್ತೊಂದ ಮೈಲಿಗಲ್ಲು.  ಕರ್ನಾಟಕದ ರಾಜಧಾನಿ ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದೆಯಲ್ಲದೆ ಹಲವಾರು ಹೆಗ್ಗುರುತುಗಳಿಗೂ ತೆರೆದುಕೊಂಡ ನಗರ.  ಅಭಿವೃದ್ದಿ , ಶಿಕ್ಷಣ ಆರ್ಥಿಕ ಕ್ಷೇತ್ರದಲ್ಲಿ ಇಟ್ಟಿರುವ ಹೆಜ್ಜೆ ವಿಶ್ವವೇ ನಮ್ಮತ್ತ ತಿರುಗುವಂತೆ ಮಾಡಿದೆ ಎಂದರೆ ತಪ್ಪಾಗದು.

ಶ್ರೀಮಂತಗಳ ನಗರಗಳ ಸಾಲಿನಲ್ಲಿ ಬೆಂಗಳೂರು 4ನೇ ಸ್ಥಾನ ಪಡೆದಿದೆ. ಒಟ್ಟಾರೆ ಭಾರತದಿಂದ ವಿದೇಶಗಳಿಗೆ ತೆರಳುವ ಟೆಕ್ಕಿಗಳ ಪೈಕಿ ಬಹಳಷ್ಟು ಮಂದಿ ಬೆಂಗಳೂರಿಗನವರಾಗಿರುತ್ತಾರೆ.
ದೇಶದ ವಿವಿಧೆಡೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಗಲ್ಲಿ ಬೆಂಗಳೂರಿನಲ್ಲೇ ಶೇ.35ರಷ್ಟು ಇರುವುದು ನಮ್ಮ ಸಾಧನೆ.  ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಶಿಕ್ಷಣವನ್ನು ನೀಡುವಲ್ಲಿಯೂ ರಾಜ್ಯ ಅಗ್ರಗಣ್ಯ ಸ್ಥಾನದಲ್ಲಿದೆ. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ದೇಶ, ವಿದೇಶ ಸೇರಿದಂತೆ ಇತರೆ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಜ್ಞಾನಾರ್ಜನೆ ಮಾಡಲು ವಿಫುಲ ಅವಕಾಶಗಳಿವೆ.

ಒಟ್ಟಾರೆ ದೇಶದ ರೇಷ್ಮೆ ಉದ್ಯಮದಲ್ಲಿ 35 ಶತಕೋಟಿ ಡಾಲರ್ ಸಿಂಹಪಾಲು ಬೆಂಗಳೂರಿನ ರೇಷ್ಮೆ ಘಟಕಗಳಿಂದ ವ್ಯವಹಾರ ನಡೆಯುತ್ತದೆ ಎಂಬುದು ಹೆಗ್ಗಳಿಕೆಯಲ್ಲದೇ ಮತ್ತೇನು? ತೆರಿಗೆ, ರಫ್ತು, ಐಟಿ ಕ್ಷೇತ್ರ ಹಾಗೂ ವೈಮಾನಿಕ ಕ್ಷೇತ್ರದಲ್ಲೂ ಕರ್ನಾಟಕದ ಪಾಲು ಸಾಕಷ್ಟಿದೆ. ಭಾರತ ಗಣ್ಯರಾಜ್ಯ ವ್ಯವಸ್ಥೆಯಡಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದೊಂದಿಗೆ ವಿಚಾರ, ಅಭಿವ್ಯಕ್ತಿ ಸ್ಥಾನಮಾನ ಮತ್ತು ಅವಕಾಶದ ಸಮಾನತೆಯೂ ದೊರೆಯುವಂತೆ ಮಾಡುವುದು ರಾಷ್ಟ್ರದ ಏಕತೆಗೆ ಭ್ರಾತೃತ್ವವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ನಾವು ಒಪ್ಪಿಕೊಂಡು ಜಾರಿಗೊಳಿಸಿದ್ದೇವೆ.  ಆದರೆ ಈ ಸಂಕಲ್ಪದಂತೆ ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿ ಕಾಲಾನುಕ್ರಮಕ್ಕೆ ಅನುಗುಣವಾಗಿ ಉಂಟಾಗುವ ಸಮಸ್ಯೆ ನಿವಾರಣೆಯಲ್ಲಿ ಕೇಂದ್ರ ನಿರ್ಲಕ್ಷ್ಯ ತೋರುತ್ತಿರುವುದರಿಂದ ರಾಜ್ಯಗಳ ವ್ಯವಸ್ಥೆ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ.

ಪ್ರಧಾನಿಯವರು ಇಂದಿನ ಸ್ಮಾಟ್ ಯುಗದ ನೇತಾರರಾಗಿ ಒಂದು ಕುಗ್ರಾಮದ ಬಾಲಕಿಯ ಶೌಚಾಲಯ ನಿರ್ಮಾಣ ಸಾಹಸಗಾಥೆಯನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಅರಿತು ಅದನ್ನು ತಮ್ಮ ಮನ್ ಕಿ ಬಾತ್‍ನಲ್ಲಿ ಪ್ರಸ್ತಾಪಿಸುವರಾದರೆ ಒಟ್ಟಾರೆ ರಾಜ್ಯದ ಜನ ಹಾಗೂ ರೈತರ ಅಳಿವು ಉಳಿವಿಗೆ ಕಾರಣವಾಗಿರುವ ನೀರಿನ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯವೇಕೆ? ಎಂಬಂತಹ ಹಲವು ವಿಚಾರ ಕಾಡದೇ ಇರದು.  ಭಾರತದ ಏಳಿಗೆಯಲ್ಲಿ ಕರ್ನಾಟಕ ಪಾತ್ರ ಮಹತ್ವದ್ದಾಗಿದ್ದರೂ ಅದನ್ನು ಅವಗಣನೆ ಮಾಡುತ್ತಿರುವುದೇಕೆ?ಪ್ರತಿ ರಾಜ್ಯದ ಜನರ ಹಿತ ಒಕ್ಕೂಟ ವ್ಯವಸ್ಥೆಯಲ್ಲಿ ಅತಿ ಪ್ರಾಮುಖ್ಯತೆ ಪಡೆಯುವಾಗ ಇಂತಹ ಕಾವೇರಿ ವಿಚಾರದಲ್ಲಿನ  ಮಲತಾಯಿ ಧೋರಣೆ ಮಾತ್ರ ಪ್ರಶ್ನಾರ್ಥಕ(?) ಚಿಹ್ನೆ ರೂಪದಲ್ಲಿ ಕಾಡುತ್ತಲೇ ಇದೆ. ಇದು ನಮ್ಮ ದೌರ್ಭಾಗ್ಯ.

Facebook Comments

Sri Raghav

Admin