ಬಲೂನ್‌ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟ , ನಾಲ್ವರಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Baloon-Blast

ಬೆಂಗಳೂರು. ಜ.28 : ಬೆಂಗಳೂರಿನ ವಸಂತನಗರದಲ್ಲಿ ನಿನ್ನೆ ರಾತ್ರಿ ಬಲೂನ್‌ಗೆ ಹೀಲಿಯಮ್ ಗಾಳಿ ತುಂಬಿಸುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಬಲೂನ್‌ ವ್ಯಾಪಾರಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.  ‘ಬ್ಲೂ‌ ವ್ಯಾಪಾರ ಮಾಡುತ್ತಿದ್ದ ಮುಖೇಶ್‌, ಅವುಗಳನ್ನು ಮಾರಾಟ ಮಾಡಲು ವಸಂತನಗರದ 10ನೇ ಕ್ರಾಸ್‌ ರಸ್ತೆಗೆ ರಾತ್ರಿ 9ರ ಸುಮಾರಿಗೆ ಬಂದಿದ್ದರು.  ಈ ವೇಳೆ ಅವರ ಟಿವಿಎಸ್‌ ಎಕ್ಸೆಲ್‌ ದ್ವಿಚಕ್ರ ವಾಹನದ ಮುಂಭಾಗದಲ್ಲಿ 10 ಕೆ.ಜಿ. ತೂಕದ ಸಿಲಿಂಡರ್‌ ಇಟ್ಟುಕೊಂಡಿದ್ದರು. ಆ ಸಿಲಿಂಡರ್‌ ಮೂಲಕ ಬಲೂನ್‌ಗೆ ಗಾಳಿ ತುಂಬಿಸುತ್ತಿದ್ದ ವೇಳೆಯೇ ಈ ಸ್ಫೋಟ ಸಂಭವಿಸಿತ್ತು. ಪರಿಣಾಮ ಮುಖೇಶ್‌ ಹಾಗೂ ಬಲೂನ್‌ ಖರೀದಿಸಲು ಬಂದಿದ್ದ  ಮೂವರು ಗಾಯಗೊಂಡರು ಎಂದು ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ತಿಳಿಸಿದರು.

ಗಾಯಗೊಂಡ ಬಲೂನ್ ವ್ಯಾಪಾರಿ ಮುಖೇಶ್ (35), ಸ್ಥಳೀಯರಾದ ಲಕ್ಷ್ಮಿದೇವಿ (38), ಅಮ್ಮು (22) ಹಾಗೂ ಯುವರಾಜ್ (27) ಗಾಯಗೊಂಡವರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನ ಭಾಗಶಃ ಸುಟ್ಟು ಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin