ಬಲೆಗೆ ಬಿದ್ದ ಮನೆಗಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

robbry

ಗೌರಿಬಿದನೂರು, ಆ.18- ಪಟ್ಟಣದ ಜನತೆಗೆ ತಲೆನೋವಾಗಿದ್ದ ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೂದಲು ವ್ಯಾಪಾರಿಗಳಾದ ಸುಬ್ಬ ಸುಬ್ಬಣ್ಣ (25), ರಾಜು, ತಿಕ್ಕಲೋಡು (23), ಗಂಗರಾಜು ಕೋಳಿ (24) ಬಂಧಿತ ಆರೋಪಿಗಳು.ಈ ಆರೋಪಿಗಳು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಮನೆಗಳ್ಳತನ ಮಾಡಿ ಈ ಭಾಗದ ಜನರಿಗೆ ತಲೆ ನೋವಾಗಿ ಪರಿಣಮಿಸಿದ್ದರು. ಕಲ್ಲೂಡಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇವರು ಗಸ್ತಿನಲ್ಲಿದ್ದ ಎಸ್‍ಐ ನಯಾಜ್‍ಬೇಗ್ ಕೈಗೆ ಸಿಕ್ಕಿ ಬಿದ್ದಾಗ ಮನೆಗಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ವಿಷಯ ಬಹಿರಂಗಗೊಂಡಿದೆ.
ವಿಚಾರಣೆ ಸಂದರ್ಭದಲ್ಲಿ 1.50 ಲಕ್ಷ ಬೆಲೆ ಬಾಳುವ 45 ಗ್ರಾಂ. ಒಡವೆ, ಮತ್ತು 500 ಗ್ರಾಂ ಬೆಳ್ಳಿ ವಸ್ತುಗಳನ್ನು ಪಟ್ಟಣದ ಸುಮಂಗಲಿ ಬಡಾವಣೆ, ಹೂವಾಡಿಗರ ಗಲ್ಲಿ, ಪುರಸಭೆ ವಸತಿ ಗೃಹಗಳಲ್ಲಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಎಂ.ವಿ.ಶೇಷಾದ್ರಿ ನೇತೃತ್ವದಲ್ಲಿ ಎಸ್‍ಐ ನಯಾಜ್‍ಬೇಗ್, ಪೇದೆಗಳಾದ ಇನಾಯಿತ್‍ವುಲ್ಲಾ, ಅಶ್ವತ್ಥಪ್ಪ, ಸುರೇಶ್‍ಕುಮಾರ್, ನಟರಾಜ್, ನಾಗೇಶ್, ಸುಬ್ರಮಣ್ಯಂ, ಶ್ರೀರಾಮಯ್ಯ, ಆನಂದಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin