ಬಳ್ಳಾರಿಗೆ ರೆಡ್ಡಿ ರೀ ಎಂಟ್ರಿ ಯಾದ ಮೊದಲ ದಿನವ ಕೇಸ್ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy

ಬಳ್ಳಾರಿ,ನ.2- ನನಗೆ ಕನ್ನಡದ ಮೇಲೆ ಅಭಿಮಾನವಿದೆ. ಅದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಾಡಗೀತೆ ಅಭಿಯಾನವನ್ನು ಆಯೋಜಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ. ನಗರದ ರುಕ್ಮಿಣಮ್ಮ ಚಂಗಾರೆಡ್ಡಿ ಮೆಮೋರಿಯಲ್‍ನ ವೃದ್ಧಾಶ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಮೇಲಿನ ಅಭಿಮಾನಕ್ಕಾಗಿ ನಾನೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತೇನೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಸಂಸದ ಶ್ರೀರಾಮುಲು, ಶಾಸಕ ನಾಗೇಂದ್ರ, ಸುರೇಶ್ ಬಾಬು ಸೇರಿದಂತೆ ಹಲವಾರು ಮಂದಿ ಭಾಗವಹಿಸಿ ಆಶ್ರಮದ ವೃದ್ಧರಿಗೆ ನೆರವಾದರು.

ಜನಾರ್ದನ ರೆಡ್ಡಿ ಅವರು ನಗರದ ಹಾವಂಭಾವಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ವೇಳೆ ನೂರಾರು ಅಭಿಮಾನಿಗಳು ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ನನ್ನನ್ನು ಬಳ್ಳಾರಿಯಿಂದ ಅವಮಾನ ಮಾಡಿ ಕರೆದೊಯ್ದಿದ್ದರು. ಆ ನೋವು ಇನ್ನು ಮಾಸಿಲ್ಲ. ಆದರೆ ಇಂದು ಬಳ್ಳಾರಿಯ ಜನ ನನ್ನನ್ನು ಅಭಿಮಾನದಿಂದ ಸ್ವಾಗತಿಸಿದ್ದಾರೆ. ಇದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪ್ರಕರಣ ದಾಖಲು:
ಅಭಿಮಾನಿಗಳು ಪೊಲೀಸರಿಂದ ಅನುಮತಿ ಪಡೆಯದೆ ಮೆರವಣಿಗೆ ಮಾಡಿ ಮೈಕ್ ಬಳಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin