ಬಳ್ಳಾರಿಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಂಕಿತ ಸಿಮಿ ಸಂಘಟನೆಯ ಉಗ್ರ

ಈ ಸುದ್ದಿಯನ್ನು ಶೇರ್ ಮಾಡಿ

SIMI-Terrorist

ಬಳ್ಳಾರಿ, ನ.3- ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜು ದಂಧೆಗೆ ಸಂಬಂಧಿಸಿದಂತೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಳೆದ ರಾತ್ರಿ ಕೌಲ್‍ಬಜಾರ್ ಪೊಲೀಸರು ಹಾಗೂ ಉಗ್ರ ನಿಗ್ರಹ ದಳ ಪಡೆ ಮಿಂಚಿನ ದಾಳಿ ನಡೆಸಿ ಇಬ್ಬರು ಶಂಕಿತ ಸಿಮಿ ಸಂಘಟನೆಯ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ದಾಳಿ ಮಾಹಿತಿ ಮೊದಲೇ ಸಿಕ್ಕಿ 6ಕ್ಕೂ ಹೆಚ್ಚು ಮಂದಿ ಪರಾರಿಯಾಗಿದ್ದಾರೆ. ಇಬ್ಬರನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿ ಸಂದರ್ಭದಲ್ಲಿ ಒಬ್ಬ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯು ನಡೆದಿದ್ದು, ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲಂಬಾಷಾ ಎಂಬಾತ ಈ ಶಸ್ತ್ರಾಸ್ತ್ರಗಳನ್ನು ತನ್ನ ಸಹಚರರಿಗೆ ನೀಡಿ ರಾಜ್ಯದ ಹಲವೆಡೆ ಅದನ್ನು ಸಾಗಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin