ಬಳ್ಳಾರಿಯಲ್ಲಿ ಶ್ರೀರಾಮುಲು ‘ಅರಮನೆ’ ಗೃಹಪ್ರವೇಶ : ವಿಶೇಷತೆ ಏನು..? ಖರ್ಚಾಗಿದ್ದೆಷ್ಟು..?

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ.ನ.05 : ಬಣ್ಣದ ಬಣ್ಣದ ಗ್ರಾನೈಟ್ ಶಿಲೆಯ ಬಳಕೆ, ಅತ್ಯಾಧುನಿಕ ವಿನ್ಯಾಸ, ಬೆರಗು ಮೂಡಿಸುವ ಶಿಲ್ಪಕಲೆ, ಅಲ್ಲಲ್ಲಿ ವಿದೇಶಿ ಶೈಲಿಯ ಬೆರಕೆ, ನವಿರಾದ ಕುಸುರಿ ಕೆಲಸದ ಶಿಲ್ಪಗಳು, ಭಾರೀ ಗಾತ್ರದ ಶಿಲಾ ಸರಗಳು, ಚಿತ್ತಾಕರ್ಷಕ ಮೇಲ್ಛಾವಣಿ, ಗೋಡೆ, ನೆಲ ಹಾಸು, ಅಚ್ಚುಕಟ್ಟಾದ ಮೆಟ್ಟಿಲುಗಳು, ಕಂಬಗಳು.  ಇದು ಸಂಸದ ಶ್ರೀರಾಮಲು ಅವರು ಕಟ್ಟಿದ ಮನೆಯಲ್ಲಿರುವ ಕಲಾ ಕುಸುರಿಯ ವೈಭವ ದೃಶ್ಯ. ಶ್ರೀರಾಮುಲು ನಿರ್ಮಾಣ ಮಾಡಿರುವ ಈ ಮಹಲ್, ರಾಜಾಧಿರಾಜರ ಅರಮನೆಯನ್ನೂ ನಾಚಿಸುವಂತಿದೆ. ಆಪ್ತಮಿತ್ರ ಜನಾರ್ದನ ರೆಡ್ಡಿ ಇಂದು ಮನೆಯನ್ನು ಉದ್ಘಾಟಿಸುವ ಮೂಲಕ ಗೃಹಪ್ರವೇಶ ಮಾಡಿದ್ದಾರೆ.

Ramulu-2

ಸುದೀರ್ಘ ಸಮಯದ ನಂತರ ಮಂಗಳವಾರ ಕರ್ಮ ಭೂಮಿ ಬಳ್ಳಾರಿ ಪುರ ಪ್ರವೇಶ ಮಾಡಿದ್ದ ಜನಾರ್ದನ ರೆಡ್ಡಿ, ಇಂದು ಆಪ್ತಮಿತ್ರನ ಅರಮನೆಯನ್ನು ಉದ್ಘಾಟಿಸಿದ್ದಾರೆ. ಶ್ರೀರಾಮುಲು ನೂತನ ಗೃಹ ಪ್ರವೇಶ ಇಂದು ಅತ್ಯಂತ ಆಡಂಬರದಿಂದ ನೆರವೇರಿದೆ. ಬಳ್ಳಾರಿಯ ಅಹಂಭಾವಿ ಪ್ರದೇಶದಲ್ಲಿ ವಾಸ್ತು ಪ್ರಕಾರವಾಗಿ ನಿರ್ಮಿಸಲಾಗಿರುವ ಈ ಭವ್ಯ ಬಂಗಲೆ ಎಲ್ಲರ ಕಣ್ಮು ಕುಕ್ಕುತ್ತಿದೆ. ಜನಾರ್ದನ ರೆಡ್ಡಿ ನಿವಾಸದ ಪಕ್ಕದಲ್ಲೇ ಸುಮಾರು ಒಂದೂ ಮುಕ್ಕಾಲು ಎಕರೆ ಪ್ರದೇಶದಲ್ಲಿ ಈ ಮಹಲು ನಿರ್ಮಾಣಗೊಂಡಿದೆ. ಈ ಮಹಲಿನ ನಿರ್ಮಾಣದ ಹಿಂದೆ ನುರಿತ ಕಾರ್ಮಿಕರ 8 ವರ್ಷಗಳ ಶ್ರಮವಿದೆ. ಗೆಳೆಯ ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡದ ಹೊರತು ಹೊಸ ಮನೆ ಪ್ರವೇಶ ಮಾಡಲ್ಲ ಎಂದು ಶ್ರೀರಾಮುಲು ಪ್ರತಿಜ್ಞೆ ಮಾಡಿದ್ದರು. ಅದರಂತೆ ಇಂದು ಮಿತ್ರನ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಿದ್ದಾರೆ.

Ramulu-5

ಮನೆಯಲ್ಲಿ ಏನಿದೆ?

ಭವ್ಯವಾದ ಬಾಗಿಲುಗಳು, ಅಗಲವಾದ ಮೊಗಸಾಲೆ, ದರ್ಬಾರ್ ಹಾಲ್ ಹೋಲುವ ಹಜಾರ, ಈಜು ಕೊಳ, ವಿಸ್ತೀರ್ಣವಾದ 6 ಮಲುಗುವ ಕೋಣೆ, ಅರಸೊತ್ತಿಗೆ ನೆನಪಿಸೋ ಡೈನಿಂಗ್ ಹಾಲ್, ಒಂದಲ್ಲಾ ಅಂತ ಎರಡೆರಡು ಮಾಡ್ಯೂಲರ್ ಅಡುಗೆ ಮನೆ ಸೇರಿದಂತೆ ಅನೇಕ ಅಚ್ಚರಿಗಳನ್ನು ಶ್ರೀರಾಮುಲು ಪ್ಯಾಲೆಸ್ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ರಾಜ ಭವನ ಗೋಡೆಯಷ್ಟೇ ಉದ್ದದ ಕಾಂಪೌಂಡು ಹೊಂದಿದ್ದು, ದೊಡ್ಡ ಸಮಾರಂಭ ಮಾಡುವಷ್ಟು ಹುಲ್ಲು ಹಾಸು ಇದೆ. ಚಿಕ್ಕ ಕೊಳ ಮೀರಿಸುವಂಥ ಈಜು ಕೊಳ, ಅಂತಾರಾಷ್ಟ್ರೀಯ ಗುಣ ಮಟ್ಟದ ಜಿಮ್, 50 ಮಂದಿ ಊಟ ಮಾಡುವಷ್ಟು ಭವ್ಯ ಭೋಜನ ಗೃಹ. ಅರಮನೆಯ ದರ್ಬಾರ್ ಹಾಲ್‍ಗಿಂತ ದೊಡ್ಡ ಹಜಾರ ಈ ಮನೆಯಲ್ಲಿದೆ.

Ramulu-8

 

ಲಕ್ಷಾಂತರ ರೂ ಮೌಲ್ಯದ ಕ್ರಿಸ್ಟಲ್ ತೂಗು ದೀಪಗಳು ಇದ್ದು, ಮನೆಯನ್ನು ಬಹು ವೆಚ್ಚದ ಇಟ್ಯಾಲಿಯನ್ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಮನರಂಜನೆಗಾಗಿ ಅತ್ಯಾಧುನಿಕ ಮಿನಿ ಥಿಯೇಟರ್ ಇದ್ದು, ಕೋಟ್ಯಂತರ ರೂಪಾಯಿ ಮೌಲ್ಯದಲ್ಲಿ ಒಳ ವಿನ್ಯಾಸನ್ನು ರೂಪಿಸಲಾಗಿದೆ. ಮನೆಯಲ್ಲಿ ಎತ್ತ ನೋಡಿದ್ರೂ ಟೀಕ್ ವುಡ್‍ನ ಪೀಠೋಪಕರಣವಿದ್ದು, ಮಹಡಿಗೆ ಹೋಗಲು ಎರಡು ಲಿಫ್ಟ್ ಇದೆ. ಮನಸ್ಸನ್ನು ತಣಿಸಲು ಬೋನ್ಸಾಯ್ ಗಿಡಗಳ ಗಾರ್ಡನ್ ಇದೆ.

Ramulu-7

ಬೆಲೆ ಎಷ್ಟು?

ಮನೆಯನ್ನು ಕಣ್ತಿಂಬಿಕೊಂಡ ಬಳ್ಳಾರಿ ಜನರಲ್ಲಿ ಇದರ ಬೆಲೆ ವಿಚಾರವಾಗಿ ವಾದ ಸರಣಿ ಆರಂಭವಾಗಿದೆ. 25 ಕೋಟಿಯಿಂದ 100 ಕೋಟಿವರೆಗೆ ಇದರ ಮೌಲ್ಯ ಕಟ್ಟುತ್ತಿದ್ದಾರೆ. ಆದರೆ ಶ್ರೀರಾಮುಲು ಅವರೇ ಆಪ್ತರಲ್ಲಿ ಹೇಳಿಕೊಂಡಿರುವ ಪ್ರಕಾರ ಈ ಅರಮನೆಯ ಬೆಲೆ 50 ಕೋಟಿ ರೂ. ಹೆಚ್ಚಂತೆ.

► Follow us on –  Facebook / Twitter  / Google+

Ramulu-1
Ramulu-3 Ramulu-4
Ramulu-6

Ramulu-9 Ramulu-10 Ramulu-11 Ramulu-12 Ramulu-13

Facebook Comments

Sri Raghav

Admin