ಬಸವನಹಳ್ಳಿ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಗೆ ಚಾಂಪಿಯನ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು, ಆ.25- ನಗರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಚಾಂಪಿಯನ್ ಆದ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಭಾಗ್ಯಜ್ಯೋತಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.ನಗರದ ಬಸವನಹಳ್ಳಿ ಸರ್ಕಾರಿ ಪವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಎಸ್‍ಡಿಎಂಸಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮತ್ತು ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದರು.

ವಿದ್ಯಾರ್ಥಿನಿ ಭಾಗ್ಯಜ್ಯೋತಿ 3 ಸಾವಿರ ಮೀ ನಡಿಗೆ, 1500 ಮೀ ಓಟದಲ್ಲಿ ಪ್ರಥಮ, 3 ಸಾವಿರ ಮೀ ಹಾಗೂ ಗುಡ್ಡಗಾಡು ಓಟದಲ್ಲಿ ದ್ವಿತೀಯ, 4*100 ಮತ್ತು 4*400 ಮೀಟರ್ ರಿಲೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ವೈಯುಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿದ್ದರು.ಇದೇ ಕಾಲೇಜಿನ ಪೂಜಾ 800 ಮೀ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ, ಪ್ರತೀಕ 3ಸಾವಿರ ಮೀ ಓಟದಲ್ಲಿ ದ್ವಿತೀಯ, ಆಶಾ ಗುಂಡು ಎಸೆತ ಪ್ರಥಮ, ರಶ್ಮಿ ಬರ್ಜಿ ಎಸೆತ ಪ್ರಥಮ ಸ್ಥಾನ ಪಡೆದಿದ್ದು , ಕಬ್ಬಡಿ ಪ್ರಥಮ ಹಾಗೂ ಖೋ ಖೋದಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಬಹುಮಾನ ವಿತರಿಸಿ ಅಭಿನಂದಿಸಿದ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿಕೊಂಡು ಅದರ ನಡುವೆ ಅಲ್ಪ ಸಿಗುವ ಸರ್ಕಾರಿ ಸವಲತ್ತನ್ನು ಬಳಸಿಕೊಂಡು ಹರ ಸಾಹಸದಿಂದ ಆಟೋಟ ಸ್ಪರ್ಧೆಯನ್ನು ಅಭ್ಯಾಸ ಮಾಡಿ ಈ ಮಟ್ಟದಲ್ಲಿ ಯಶಸ್ಸು ಗಳಿಸಿರುವುದು ಅಭಿನಂದರ್ನಾಹ.ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಮುಂದೆ ಕ್ರೀಡೆಗಾಗಿ ಪ್ರತ್ಯೇಕ ನಿಧಿಬಳಸಿಕೊಂಡು ಹೆಚ್ಚಿನ ಅನುಕೂಲ ಕಲ್ಪಸಿ ಪ್ರೊತ್ಸಾಹಿಸುವ ಭರವಸೆ ನೀಡಿದರು.
ಉಪನ್ಯಾಸಕರಾದ ವಿರೂಪಾಕ್ಷ , ದಯಾನಂದ್, ನಾಗರಾಜು, ಕಿರಣ್, ಪ್ರಕಾಶ್, ಧರ್ಮಶೆಟ್ಟಿ , ಪುರುಶೊತ್ತಮ್, ಚಂದ್ರಮೌಳಿ, ಜಾನವಿ, ಲಕ್ಷ್ಮೀಕಾಂತ್, ಶಂಕರ್‍ನಾಯಕ್, ಲೋಹಿತ್ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin