ಬಸವರಾಜರಾಯರೆಡ್ಡಿ ಹೇಳಿಕೆಗೆ ಟೀಕೆ : ಕ್ಷಮೆಯಾಚಿಸಲು ಜೆಡಿಎಸ್ ಶಾಸಕರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

asfgASDGTG

ಮೈಸೂರು,ಆ.20-ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾನಸಿಕ ಸೀಮಿತ ಕಳೆದುಕೊಂಡಿದ್ದು, ಮನಬಂದಂತೆ ಮಾತನಾಡುತ್ತಿದ್ದಾರೆ. ವಿವಿಗಳ ಕುಲಪತಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವುದರ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕೆಂದು ಶಾಸಕ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಶ್ರೀಕಂಠೇಗೌಡ ಒತ್ತಾಯಿಸಿದ್ದಾರೆ.  ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉಪಕುಲಪತಿಗಳನ್ನು ಡಕಾಯಿತರು ಎಂದು ಕರೆಯುವ ಮೂಲಕ ಸಚಿವರು ತಮ್ಮ ಜವಾಬ್ದಾರಿಯನ್ನು ಮರೆತು ಮಾತನಾಡುತ್ತಿದ್ದಾರೆ, ಮೈಸೂರಿಗೆ ಬಂದು ವಿಶ್ವವಿದ್ಯಾನಿಲಯವನ್ನು ನೋಡಿ ನಿಮಗೆ ಗೌರವದ ಜೊತೆಗೆ ವಾಸ್ತವ ಅರ್ಥವಾಗುತ್ತದೆ. ಸುಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.
ತಮ್ಮ ಪಕ್ಷದಲ್ಲೇ ಹಲವಾರು ಹುಳುಕುಗಳಿವೆ. ಭ್ರಷ್ಟಾಚಾರ ತಡೆಗಟ್ಟುವಂತಹ ಲೋಕಾಯುಕ್ತವನ್ನೇ ಮುಚ್ಚಿ , ನಿಜವಾದ ಡಕಾಯಿತರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೀರಿ. ಸಾರ್ವಜನಿಕವಾಗಿಯೂ ಸರ್ಕಾರದ ಈ ನಿಲುವಿನ ವಿರುದ್ಧ ಸಾಕಷ್ಟು ವ್ಯಕ್ತವಾಗಿದೆ. ಇದನ್ನು ಅರಿಯದೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು. ಬಸವರಾಜ ರಾಯರೆಡ್ಡಿಯವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪಾಠ ಕಲಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin