ಬಸ್’ಗೆ ಕಬ್ಬಿಣದ ಕಂಬಿ ಹೊತ್ತೊಯ್ಯುತ್ತಿದ್ದ ಲಾರಿ ಡಿಕ್ಕಿ, ಮೂವರ ಸಾವು, ಹಲವಾರು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

Accident--01
ಕಾರವಾರ, ಜುಲೈ 7: ಅಸುರಕ್ಷಿತವಾಗಿ ಕಬ್ಬಿಣದ ಕಂಬಿ ಹೊತ್ತೊಯ್ಯುತ್ತಿದ್ದ ಲಾರಿ ಕುಮಟಾದಿಂದ ಗೋರ್ಕಣಕ್ಕೆ ತೆರಳುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಹಲವಾರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ರಾಮಲೀಲಾ ಆಸ್ಪತ್ರೆಯ ಬಳಿ ಸಂಭವಿಸಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಕಂಬವು ಮೂರ್ನಾಲ್ಕು ಅಡಿಯಷ್ಟು ಹೊರಗೆ ಚಾಚಿಕೊಂಡಿತ್ತು. ಈ ವೇಳೆ ಕುಮಟಾ ನಿಲ್ದಾಣದಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್‌ ಗೆ ರಾಮಲೀಲಾ ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಕಂಬ ಬಡಿದಿದೆ. ಇದರಿಂದಾಗಿ ಬಸ್‌ನ ಒಂದು ಬದಿಯ ಭಾಗ ನಜ್ಜುಗುಜ್ಜಾಗಿದೆ.

Accident--02

ಸಾರಿಗೆ ಬಸ್ ಚಾಲಕ ಪುಂಡಲೀಕ ಗೌಡ, ನಾಲ್ವರು ವಿದ್ಯಾರ್ಥಿಗಳು ಸೇರಿ ಗಾಯಗೊಂಡ 15ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಗಂಭೀರ ಗಾಯಗೊಂಡ 8 ಮಂದಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದವರನ್ನು ಕುಮಟಾದ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

Accident--03 Accident--04 Accident--05

Facebook Comments

Sri Raghav

Admin